:ಸಮೀಪದ ಮಲಿಕವಾಡ ಗ್ರಾಮದ ದೂಧಗಂಗಾ ನದಿ ತೀರದಲ್ಲಿ ಅಳವಡಿಸಲಾಗಿದ್ದ 18 ವಿದ್ಯುತ್ ಮೋಟಾರ್ಗಳ ಕೇಬಲ್ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

ನದಿ ತೀರದ ಜಮೀನುಗಳಿಗೆ ನೀರುಣಿಸಲು ರೈತರು ಅಳವಡಿಸಿದ್ದ ಮೋಟಾರ್ಗಳ ಬೆಲೆಬಾಳುವ ಕೇಬಲ್ಗಳನ್ನು ಕತ್ತರಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಬೆಳಿಗ್ಗೆ ಜಮೀನಿಗೆ ನೀರು ಹಾಯಿಸಲು ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಬೆಳೆಗಳಿಗೆ ನೀರುಣಿಸಲಾಗದೆ ರೈತರು ಪರದಾಡುವಂತಾಗಿದೆ. ಈ ಘಟನೆಯಿಂದ ಸ್ಥಳೀಯ ರೈತರಿಗೆ ಆರ್ಥಿಕವಾಗಿ ಭಾರಿ ನಷ್ಟ ಸಂಭವಿಸಿದೆ.
ರಾತ್ರಿ ವೇಳೆಯಲ್ಲಿ ಕಾವಲು ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ಕೃತ್ಯ ಎಸಗಿದ್ದಾರೆ. ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿ, ಕಳುವಾದ ಕೇಬಲ್ಗಳನ್ನು ಮರಳಿ ಕೊಡಿಸಬೇಕೆಂದು ರೈತರು ತೀವ್ರ ಒತ್ತಾಯಿಸಿದ್ದಾರೆ.
ಈ ಕುರಿತು ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
