Vijaypura

ಬಸವನಾಡಿನ ಯುವಕನ ಅಂತರರಾಷ್ಟ್ರೀಯ ಸಾಧನೆ; ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್‌ನಲ್ಲಿ ಸಚಿನ್ ಸಾಳುಂಕೆಗೆ ಬೆಳ್ಳಿ

Share

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ತಿಗಣಿ ಬಿದರಿ ಗ್ರಾಮದ ಯುವಕ ಸಚಿನ್ ಸಾಳುಂಕೆ ಅವರು ಅಂತರರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸಚಿನ್ ಸಾಳುಂಕೆ ಅವರು 105 ಕೆ.ಜಿ. ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸ್ಪರ್ಧೆಯಲ್ಲಿ ಸಚಿನ್ ಅವರು 310 ಕೆ.ಜಿ. ಸ್ಕ್ವಾಟ್, 180 ಕೆ.ಜಿ. ಬೆಂಚ್ ಪ್ರೆಸ್ ಹಾಗೂ 270 ಕೆ.ಜಿ. ಡೆಡ್‌ಲಿಫ್ಟ್ ಮೂಲಕ ಒಟ್ಟು 760 ಕೆ.ಜಿ. ಭಾರ ಎತ್ತಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ಪದಕ ಗೆದ್ದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಚಿನ್ ಸಾಳುಂಕೆ ಕಳೆದ ಐದು ವರ್ಷಗಳಿಂದ ಪವರ್‌ಲಿಫ್ಟಿಂಗ್‌ನಲ್ಲಿ ನಿರಂತರವಾಗಿ ತರಬ…

Tags:

error: Content is protected !!