Dharwad

ಧಾರವಾಡ ಕೃಷಿ ಮೇಳದಲ್ಲಿ ಕುಸಿದು ಬಿದ್ದ ಸ್ಟಾಲ್ ಶೆಡ್, ತಪ್ಪಿದ ಅನಾಹುತ….

Share

ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರೋ ಕೃಷಿ ಮೇಳದಲ್ಲಿ ಸ್ಟಾಲ್ ಶೆಡ್‌ವೊಂದು ಕುಸಿದು ಬಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಧಾರವಾಡ ಕೃಷಿ ವಿವಿ ಆವರಣದಲ್ಲಿಂದು ನಡೆದಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಈ ಘಟನೆ ನಡೆದಿದೆ. ಸ್ಟಾಲಗಾಗಿ ಹಾಕಲಾಗಿದ್ದ ಶೆಡ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಶೆಡ್ ಒಳಗೆ ಮೂವರ ಜನ ಸಿಲುಕಿಕೊಂಡಿದ್ದರು. ಶೆಡ್ ಕುಸಿಯುತ್ತಿದ್ದಂತೆ ಸ್ಥಳೀಯವಾಗಿದ್ದ ಜನ ಹಾಗೂ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ತಕ್ಷಣವೇ ರಕ್ಷಣೆಗೆ ಮುಂದಾಗಿ ಮೂರನ್ನು ರಕ್ಷಣೆ ಮಾಡಿದ್ದಾರೆ.‌ ಶೆಡ್‌ನಲ್ಲಿ ಸಿಲುಕಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯವಾಗಿ ನಿಯೋಜನೆಯಾಗಿದ್ದ ಆರೋಗ್ಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್ ಬಾರಿ ಅನಾಹುತವೊಂದು ತಪ್ಪಿದೆ.‌ ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

Tags:

error: Content is protected !!