12ದಿನದ ಗಣೇಶೋತ್ಸವದ ಸಂಭ್ರಮದ ನಡುವೆಯೇ ಧಾರವಾಡದಲ್ಲಿ ವಿಘ್ನ ನಿವಾರಕನ ವಿಸರ್ಜನೆ ಮೆರವಣಿಗೆ ಭಾವೈಕ್ಯತೆ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಕ್ಷಣಕ್ಕೆ ಸಾಕ್ಷಿಯಾಯಿತು.

ಹೌದು ಧಾರವಾಡದ ಟೀಕಾರೆ ಗೌಳಿ ಗಲ್ಲಿಯಲ್ಲಿ ಪ್ರತಿಷ್ಠಾಒನೆಗೊಂಡಿದ್ದ ರಾಮ ರಾಜ್ಯ ಗಣೇಶ ಮಂಡಳಿಯ ಗಣಪತಿ ವಿಸರ್ಜನೆ ಮೆರವಣಿಗೆ ಶುಲ್ರವಾರ ನಡೆಯಿತು. ಮೆರವಣಿಗೆ ಟೀಕಾರೆ ರಸ್ತೆಯ ಮದೀನಾ ಮಜೀದ್ ಬಳಿ ಬರುತ್ತಿದಂತೆ, ಪ್ರಮುಖ ಮುಸ್ಲಿಂ ಸಮುದಾಯದವರು ಗಣಪತಿ ಮೂರ್ತಿಗೆ ಹೂವಿನ ಹಾರ ಹಾಕಿ ಭಕ್ತಿ ಭಾವದಿಂದ ಗೌರವ ಸಲ್ಲಿಸಿವ ಮೂಲಕ ಭಾವೈಲ್ಯತೆಯ ಸಂದೇಶ ಸಾರಿದರು. ಇನ್ನೂ ಮುಸ್ಲಿಂ ಮುಖಂಡರು ಹೂವಿನ ಹಾಕಲು ಬರುತ್ತಿದಂತೆ ಗಣೇಶ ಮಂಡಳಿಯ ಓಂಕಾರ ಸೇರಿ ಉಳಿದ ಸದಸ್ಯರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಮುಸ್ಲಿಂ ಮುಖಂಡರಿಗೆ ಗೌರವಯುತವಾಗಿ ನಡೆದುಕೊಂಡು ಸೌಹಾರ್ದತೆ ಸಾರಿದರು. ಈ ವೇಳೆ ಬಿಜೆಪಿ ಮುಖಂಡ ರಾಕೇಶ ನಾಝರೆ, ಗಣೇಶ ಮಂಡಳಿ ಸದಸ್ಯರು, ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧಗೌಡರ, ಶಹರ ಪೊಲೀಸ್ ಠಾಣೆ ಪಿಎಸಐ ವಿನೋಧ ಸೆರಿ ಅನೇಕ ಮುಸ್ಲೀಂ ಭಾಂದವರ ಉಪಸ್ಥಿತರಿದ್ದರು. ಪಾಲಾರ್ಪನೆಯ ನಂತರ, ಗೌರಿ ಪುತ್ರನ ಮೆರವಣಿಗೆ ಸುಭಾಷ್ ರಸ್ತೆ, ಗಾಂಧಿ ಚೌಕ, ಹೊಸಯಲ್ಲಾಪುರ ಮಾರ್ಗವಾಗಿ ತೆರಳಿ ನುಚ್ಚಂಬ್ಲಿ ಬಾವಿಯಲ್ಲಿ ಭಕ್ತಿ ಭಾವದೊಂದಿಗೆ ವಿಸರ್ಜನೆ ಮಾಡಲಾಯಿತು.
