Khanapur

ನಾಗರಗಾಳಿ ಕ್ರಾಸ್ ಬಳಿ ಮರಕ್ಕೆ ಬೊಲೆರೋ ಡಿಕ್ಕಿ: ಭೀಕರ ರಸ್ತೆ ಅಪಘಾತಕ್ಕೆ ಯುವಕ ಬಲಿ, ಮತ್ತೊಬ್ಬ ತೀವ್ರ ಗಂಭೀರ!

Share

ರಾಮನಗರ–ಅಳ್ನಾವರ ಮಾರ್ಗದ ನಾಗರಗಾಳಿ ಕ್ರಾಸ್ ಬಳಿ ಬೊಲೆರೋ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕ ಹೊಡೆದಿದೆ. ಈ ದುರ್ಘಟನೆಯಲ್ಲಿ ಬಸ್ತವಾಡ ನಿವಾಸಿ ಶಹಜಹಾನ್ ಶಿಲ್ಲೇದಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಜಬಾಜ್ ಖಾನಾಪುರಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಕ್ಕೇರಿ ತಾಲೂಕಿನ ರಫೀಕ್ ಸಲೀಂ ಮುಲ್ಲಾ ಎಂಬಾತ ತನ್ನ ಬೊಲೆರೋ ಪಿಕಪ್ ವಾಹನದಲ್ಲಿ ಗಜಬಾಜ್ ಖಾನಾಪುರಿ ಹಾಗೂ ಶಹಜಹಾನ್ ಅವರನ್ನು ಕರೆದುಕೊಂಡು ರಾಮನಗರದಿಂದ ಅಳ್ನಾವರ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನಾಗರಗಾಳಿ ಕ್ರಾಸ್ ಬಳಿ ಚಾಲಕ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಸೀದಾ ಹೋಗಿ ಡಿಕ್ಕಿ ಹೊಡೆದಿದೆ.

ಮರದ ಭೀಕರ ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು ಶಹಜಹಾನ್ ಶಿಲ್ಲೇದಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿರುವ ಗಜಬಾಜ್ ಖಾನಾಪುರಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಚಾಲಕ ರಫೀಕ್ ಮುಲ್ಲಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:

error: Content is protected !!