Belagavi

ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಅಭಿನಂದಿಸಿದ ಹುಕ್ಕೇರಿ ಹಿರೇಮಠದ ಶ್ರೀಗಳು

Share

ಬೆಳಗಾವಿ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಉತ್ತರ ಕರ್ನಾಟಕದ ಪ್ರಸಿದ್ಧ ಮಠದ ಸ್ವಾಮಿಗಳು ಚಿಂತಕರು ಸಾವಿರಾರು ಜನರಿಗೆ ಅನ್ನದಾಸೋಹವನ್ನು ನೀಡುವ ದಾಸೋಹಿಗಳು ಬಡ ಮಕ್ಕಳ ಪಾಲಿಗೆ ಆಶಾಕಿರಣರಾಗಿ ನಿಂತ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಮೈಸೂರು ದಸರಾ ಉತ್ಸವಕ್ಕೆ ಆಮಂತ್ರಿಸಿ ರುವುದು ನಮಗೆ ಅತಿವ ಸಂತೋಷವಾಗಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠ ಸಂಸ್ಥಾನದ ಅಧಿಪತಿಗಳು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರು ಆದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಪೂಜ್ಯ ಕೊಪ್ಪಳದ ಶ್ರೀಗಳನ್ನು ಅಭಿನಂದಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠ ಸಂಸ್ಥಾನದ ಪರಮಶಿಷ್ಯರಾದ ಶ್ರೀ ಅರುಣ್ ಐಹೊಳೆ ಅವರು ಮಾತನಾಡಿ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕೊಪ್ಪಳದ ಗವಿಮಠದ ಶ್ರೀಗಳು ಎಲ್ಲರಿಗೂ ಆದರಣೀಯರಾಗಿದ್ದಾರೆ ಇವರ ಆಯ್ಕೆ ನಮಗೆ ಸಂತೋಷವನ್ನು ತಂದಿದೆ ಎಂದರು ಹುಕ್ಕೇರಿ ಹಿರೇಮಠ ಸಂಸ್ಥಾನದ ಅನೇಕ ಶಿಷ್ಯರು ಉಪಸ್ಥಿತರಿದ್ದು ಶ್ರೀಗಳನ್ನು ಅಭಿನಂದಿಸಿದರು

Tags:

error: Content is protected !!