ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಭೂಷಣ ಬೋರಸೆ ಮನವಿ ಮಾಡಿದ್ದಾರೆ.

ಮೆರವಣಿಗೆ ಮಾರ್ಗಗಳಲ್ಲಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನೇ ಬಳಸಿ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಚಿಕ್ಕ ಮಕ್ಕಳು ಹೆಚ್ಚು ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ. ಮೆರವಣಿಗೆಯಲ್ಲಿ ಕುಣಿಯುವಾಗ ಮೊಬೈಲ್ ಕಳೆದುಹೋಗುವ ಪ್ರಕರಣಗಳು ಹೆಚ್ಚಾಗುತ್ತವೆ. ಸಾಧ್ಯವಾದರೆ ಮೊಬೈಲ್ ಅನ್ನು ಮನೆಯಲ್ಲಿ ಇಡಿ. ಇಲ್ಲವಾದರೆ ಸುರಕ್ಷಿತವಾಗಿ ಮುಂಭಾಗದ ಜೇಬಿನಲ್ಲಿ ಇಟ್ಟುಕೊಳ್ಳಿ. ಜನಸಂದಣಿಯಲ್ಲಿ ಚಪ್ಪಲಿಗಿಂತ ಶೂ ಧರಿಸುವುದು ಸುರಕ್ಷಿತ.
ಮೆರವಣಿಗೆಗಳು ಅಥವಾ DJ ಸಿಸ್ಟಂಗಳ ನಡುವೆ ಯಾವುದೇ ಸ್ಪರ್ಧೆ ಬೇಡ. ಶಾಂತಿ ಮತ್ತು ಸೌಹಾರ್ದ ಕಾಪಾಡಿ. ವಿಸರ್ಜನಾ ಸ್ಥಳಗಳಲ್ಲಿ ಮಕ್ಕಳನ್ನು ನೀರು ಹಾಗೂ ಕ್ರೇನ್‌ಗಳಿಂದ ದೂರವಿಡಿ. ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಆಲೋ ಬೀತ್ ಅನಲೈಸರ್, ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್ ಹಾಗೂ ನಾರ್ಕೋಟಿಕ್ಸ್ ಅನಲೈಸರ್‌ಗಳ ಮೂಲಕ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು. ಸಂಚಾರ, ಮೆರವಣಿಗೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಭಕ್ತಿ, ಸಂಭ್ರಮದೊಂದಿಗೆ ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸೋಣ ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಮನವಿ ಮಾಡಿದ್ದಾರೆ.
