ಚಾಲಕನ ನಿಯಂತ್ರಣ ತಪ್ಪಿ ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಎಂಟು ಮಕ್ಕಳಿಗೆ ಗಾಯಗಳಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.


ಹೌದು, ಹುಬ್ಬಳ್ಳಿ ನಗರದ ದೇಸಾಯಿ ಸರ್ಕಲ್ ಬಳಿ ಬೆಳ್ಳಂಬೆಳಗ್ಗೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಗಾಯಾಳು ಶಾಲಾ ಮಕ್ಕಳನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ತರಿಂದ ಹನ್ನೆರಡು ವರ್ಷದ ಶಾಲಾ ಮಕ್ಕಳು ಆಟೋದಲ್ಲಿದ್ದರು.
ಆಟೋ ಚಾಲಕನಿಗೂ ತೀವ್ರ ಗಾಯವಾಗಿದೆ. ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆ ಎದುರು ವಿದ್ಯಾರ್ಥಿಗಳ ಪಾಲಕರು ಜಮಾವಣೆಗೊಂಡಿದ್ದಾರೆ. ಈ ಘಟನೆ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
