Dharwad

ಧಾರವಾಡ ಗ್ರಾಮೀಣ ಭಾಗದಲ್ಲಿ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್: ವಿದ್ಯಾರ್ಥಿಯ ರೀಲ್ಸ್ ವೈರಲ್

Share

ಶಾಲಾ ವಿದ್ಯಾರ್ಥಿಯೋರ್ವ ರೀಲ್ಸ್ ಮಾಡುವ ಮೂಲಕ ಹದಗೆಟ್ಟ ರಸ್ತೆಯ ಚಿತ್ರಣ ಬಿಚ್ಚಿಟ್ಟಿದ್ದು, ಇದೀಗ ರೀಲ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ವಿದ್ಯಾರ್ಥಿಯ ಈ ರೀಲ್ಸ್ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಎತ್ತಿತೋರಿದೆ.

ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಪ್ರಮೋದ್‌ ಎಂಬ ವಿದ್ಯಾರ್ಥಿ ಹಾರೋಬೆಳವಡಿ-ಆಯಟ್ಟಿ ರಸ್ತೆಯ ಚಿತ್ರಣ ಬಿಚ್ಚಿಡುವ ಮೂಲಕ ಜನಪ್ರತಿನಿಧಿಗಳ ಅಭಿವೃದ್ಧಿ ಕಾರ್ಯಗಳಿಗೆ ಕೈಗನ್ನಡಿಯಾಗಿದ್ದಾನೆ. ಹಾರೋಬೆಳವಡಿ-ಆಯಟ್ಟಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ತುಂಬ ದೊಡ್ಡ ದೊಡ್ಡ ಗುಂಡಿಗಳೇ ತಾಂಡವವಾಡುತ್ತಿವೆ. ಇದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುತ್ತಿದ್ದು, ದಯವಿಟ್ಟು ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು ರಸ್ತೆ ಸರಿ ಮಾಡಿಸಿಕೊಡಿ ಎಂದು ವಿದ್ಯಾರ್ಥಿ ಬೇಡಿಕೊಂಡಿದ್ದಾನೆ. ಈ ವಿದ್ಯಾರ್ಥಿಯ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಾರಾ ಅಥವಾ ಮತ್ತೆ ಅದೇ ನಿರ್ಲಕ್ಷ್ಯ ಧೋರಣೆ ತೋರುತ್ತಾರೋ ಕಾದು ನೋಡಬೇಕಿದೆ.

Tags:

error: Content is protected !!