Belagavi

ಬೆಳಗಾವಿಯಲ್ಲಿ ವಿಜೃಂಭಣೆಯ ’22ನೇ ಶ್ರೀ ಗಣೇಶ 2026′ ಬಾಡಿಬಿಲ್ಡಿಂಗ್ ಸ್ಪರ್ಧೆ – ಪ್ರವೀಣ್‌ ಮಜುಕರ್‌’ಗೆ ಚಾಂಪಿಯನ್ ಗರಿ!

Share

ಬೆಳಗಾವಿ ಜಿಲ್ಲಾ ಮಟ್ಟದ 22ನೇ ‘ಶ್ರೀ ಗಣೇಶ 2026’ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೈಕಟ್ಟು ಪ್ರದರ್ಶಿಸಿ ಗಮನ ಸೆಳೆದ ಯುವ ಕ್ರೀಡಾಪಟುಗಳು. ಪ್ರವೀಣ್‌ ಮಜುಕರ್‌ ‘ಚಾಂಪಿಯನ್ ಆಫ್ ಚಾಂಪಿಯನ್’ ಹಾಗೂ ಓಂಕಾರ ಪಾಟೀಲ್ ‘ಬೆಸ್ಟ್ ಪೋಸರ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ ರಾಮನಾಥ ಮಂಗಳ ಕಾರ್ಯಾಲಯದಲ್ಲಿ ಜರುಗಿದ ಅತ್ಯಾಕರ್ಷಕ 22ನೇ ‘ಶ್ರೀ ಗಣೇಶ 2026’ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯು ಕ್ರೀಡಾಭಿಮಾನಿಗಳ ಹರ್ಷೋದ್ಗಾರದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ವಿವಿಧ ತೂಕ ವಿಭಾಗಗಳಲ್ಲಿ ನಡೆದ ಈ ರೋಮಾಂಚಕಾರಿ ಸ್ಪರ್ಧೆಯಲ್ಲಿ ರಿತಿಕ್ ಲಖೆ (55 ಕೆ.ಜಿ), ಶ್ರೀಹರಿ ಬೆಳಗಾಂವಕರ್ (60 ಕೆ.ಜಿ), ವಿಕಾಸ್ ಶಹಾಪೂರಕರ (65 ಕೆ.ಜಿ), ಸುನಿಲ್ ಭಾತಕಾಂಡೆ (70 ಕೆ.ಜಿ), ಪ್ರವೀಣ್ ಮಜುಕರ್ (75 ಕೆ.ಜಿ) ಹಾಗೂ ರಾಹುಲ್ ಕುಲಾಲ್ (75+ ಕೆ.ಜಿ) ತಮ್ಮ ತಮ್ಮ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ಬಾಚಿಕೊಂಡರು. ಮಿಹೀರ್ ಪೋತದಾರ ಅವರು ಪ್ರಾಯೋಜಿಸಿದ ಪ್ರತಿಷ್ಠಿತ ‘ಶ್ರೀ ಗಣೇಶ’ ಪ್ರಶಸ್ತಿಗೆ ಭಾಜನರಾದ ಪ್ರವೀಣ್ ಮಜುಕರ್ ಅವರು ಅತ್ಯುನ್ನತ ‘ಚಾಂಪಿಯನ್ ಆಫ್ ಚಾಂಪಿಯನ್ (MLIRC)’ ಕಿರೀಟವನ್ನು ತಮ್ಮದಾಗಿಸಿಕೊಂಡರೆ, ಅಷ್ಟೇ ಆಕರ್ಷಕವಾಗಿ ಮೈಕಟ್ಟು ಪ್ರದರ್ಶಿಸಿದ ಓಂಕಾರ ಪಾಟೀಲ್ ‘ಬೆಸ್ಟ್ ಪೋಸರ್’ ಪ್ರಶಸ್ತಿಯನ್ನು ಪಡೆದು ಕ್ರೀಡಾಲೋಕದಲ್ಲಿ ಗಮನ ಸೆಳೆದರು.

Tags:

error: Content is protected !!