ತುಳು ಭಾಷೆ ವಿಚಾರದಲ್ಲಿ ಉಡುಪಿ ಮತ್ತು ದಕ್ಣಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿಸಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.


ಮಂಗಳೂರಿನ ಪ್ರಜಾಸೌಧದಲ್ಲಿ ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ನಡೆದ ಐತಿಹಾಸಿದಕ ಸಚಿವ ಸಂಪುಟ ಸಭೆ ನಡೆಸಿದರು. ಈ ವೇಳೆ ರಾಜ್ಯದ ಸಚಿವರುಗಳು ಸಭೆಯಲ್ಲಿ ಉಪಸ್ಥಿತರಿದ್ಧು, ಮಂಗಳೂರು ಮತ್ತು ದಕ್ಷಿಣ ಕನ್ನಡ ಅಭಿವೃದ್ಧಿಗೆ ಪೂರಕ ಚರ್ಚೆಗಳನ್ನು ನಡೆಸಿದರು.
ಸಭೆಯ ಬಳಿಕ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಕ್ಯಾ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಣಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯಾಗಿಸಲು ಕರಡು ಪ್ರತಿ ಸಿದ್ಧಮಾಡಿ, ಸಾರ್ವಜನಿಕ ಅಭಿಪ್ರಾಯ ರೂಪಿಸಲು ಒಂದು ತಿಂಗಳ ಸಮಯಾವಕಾಶ ನೀಡುವುದಾಗಿ ತಿಳಿಸಿದರು.ಮಲೆನಾಡು, ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ಯಾರು ಹೂಡಿಕೆ ಮಾಡುತ್ತಾರೋ, ಅವರಿಗೆ ಅನುಕೂಲವಾಗುವಂತೆ ನೀತಿ ರೂಪಿಸಲಾಗುವುದು. ಅವರ ಆರ್ಥಿಕ ಸ್ಥಿತಿಗೆ ಸಮಸ್ಯೆಯಾಗದಂತೆ ಹೂಡಿಕೆ ಆರ್ಥಿಕ ನೀತಿ, ನಗರಾಭಿವೃದ್ಧಿ ಯೋಜನೆ ರೂಪಿಸಲಾಗುವುದು. ಅಲ್ಲದೇ ಮೀನುಗಾರಿಕೆಗೆ ಸಂಬಂಧಿಸಿ ವಿವಿ ಕೂಡ ಸ್ಥಾಪಿಸಲಾಗುವುದು ಎಂದರು.ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುದಾನ ನೀಡುವ ಕುರಿತು ಪ್ರಸ್ತಾಪಿಸಿದ ಸಿಎಂ, ಎಂಎಲ್ಎ ಆದ ಕೂಡಲೇ ಅಶೋಕ್ ರೈ ಅವರು ತುಳು ಭಾಷೆಗೆ ಸ್ಥಾನಮಾನ ನೀಡುವ ಕುರಿತು ಪ್ರಸ್ತಾಪಿಸಿದ್ದು, ಆಗ ಸ್ಪೀಕರ್ ಆಗಿದ್ದ ಯು.ಟಿ ಖಾದರ್ ಅವರೂ ಕೂಡ ಒತ್ತಡ ಹಾಕಿದ್ದರು ಎಂದರು.

ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ರಾಜಕಾರಣ ಬದಿಗಿಟ್ಟು ಜನರಿಗೆ ಸಾಮಾಜಿಕ ನ್ಯಾಯ ನೀಡಲು ನಮ್ಮ ಸರ್ಕಾರ ಬದ್ಧ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಮುಂದಿನ ದಿನಗಳಲ್ಲಿ ಕರಾವಳಿಯ ಕಾರವಾರ ಮತ್ತು ಉಡುಪಿಯಲ್ಲಿ ಸಂಪುಟ ಸಭೆ ನಡೆಸಲಿದ್ದೇವೆ ಎಂದು ಸಹ ಸಿಎಂ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಸಾಮಾಜಿಕವಾಗಿ ಆರ್ಥಿಕವಾಗಿ ಬೆಳೆದ ಜಿಲ್ಲೆಯಾಗಿದೆ. ನಾನು ಸಿಎಂ ಆದ ಬಳಿಕ ಮಂಗಳೂರಿನಲ್ಲಿ ಸಭೆ ನಡೆಸುತ್ತಿದ್ದೇನೆ. ಅನೇಕ ಬಾರಿ ಮಂಗಳೂರು ಕುರಿತು ಶಾಸಕರಿಗೆ ತಿಳಿಸಿದ್ದೆ. ಮಂಗಳೂರಿನಲ್ಲಿ ನಡೆದ ಇಂದಿನ ಸಭೆ, ಬೆಂಗಳೂರಿನಲ್ಲಿ ನಡೆದ ಸಭೆಗಳ ಸಹಿತ ಕಳೆದ ಮೂರು ದಿನಗಳಿಂದೀಚೆಗೆ ವಾಣಿಜ್ಯ ಸಂಘ, ಮೀನುಗಾರರ ಸಹಿತ ಹಲವರು ಸಲಹೆ, ಸೂಚನೆ ನೀಡಿದ್ದಾರೆ. ಆರ್ಥಿಕ ಸ್ಥಿತಿ ಸಹಿತ ಹಲವು ವಿಚಾರಕ್ಕೆ ಸಂಬಂಧಿಸಿ ಕೆಲವು ಸಲಹೆಗಳನ್ನು ನೀಡಿದ್ದನ್ನು ಸ್ವೀಕರಿಸಲಾಗಿದೆ ಎಂದರು.ಭಾವನಾತ್ಮಕ ವಿಚಾರಗಳ ಕುರಿತು ಮಾಧ್ಯಮಗಳ ವರದಿಗಳ ಕುರಿತು ಗಮನ ಹರಿಸಿದ್ದೇವೆ ಎಂದರು.
ಇನ್ನು ಡಿಸಿಎಂ ಜಿ. ಪರಮೇಶ್ವರ್ ಅವರು ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿ, ಮಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ 6 ಪ್ರಮುಖ ಸೇತುವೆಗಳ ನಿರ್ಮಾಣ, ಮೀನುಗಾರಿಕಾ ವಿಶ್ವವಿದ್ಯಾಲಯ, ಸಗಟು ಮಾರುಕಟ್ಟೆ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ, ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಯ ಕುರಿತು ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದರು.
ಈ ವೇಳೆ ಸಚಿವರುಗಳು, ಅಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ಧರು.
