State

ಯುವ ಸೃಷ್ಟಿಕರ್ತರೊಂದಿಗೆ ಡಿಕೆಶಿ ಅಲ್ಪೋಪಹಾರ ಕೂಟ…

Share

ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಯುವ ಮನಸ್ಸುಗಳ ಜೊತೆ ಬಿಡುವಿಲ್ಲದ ರಾಜಕೀಯದ ನಡುವೆಯೂ ಅರ್ಥಪೂರ್ಣ ಸಮಯ ಕಳೆದಿದ್ದಾರೆ. ಮಂಗಳೂರಿನ ಐತಿಹಾಸಿಕ ಗಾಂಧಿ ಸ್ಕ್ವೇರ್ ಕಫೆಯಲ್ಲಿ ಯುವ ಕಂಟೆಂಟ್ ಕ್ರಿಯೇಟರ್ಸ್ ಜೊತೆ ಅವರು ಸೌಹಾರ್ದಯುತ ಉಪಾಹಾರ ಸೇವಿಸಿದ್ದಾರೆ.

ಮಂಗಳೂರಿನ ಐತಿಹಾಸಿಕ ಗಾಂಧಿ ಸ್ಕ್ವೇರ್ ಕಫೆಯಲ್ಲಿ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯುವ ಸೃಷ್ಟಿಕರ್ತರ (Young Creators) ಜೊತೆ ಸಾಂಪ್ರದಾಯಿಕ ಮಂಗಳೂರು ಶೈಲಿಯ ಉಪಾಹಾರ ಸವಿಯುತ್ತಾ ಮುಕ್ತವಾಗಿ ಸಂವಾದ ನಡೆಸಿದರು. 1934ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ ಇತಿಹಾಸ ನಿರ್ಮಿಸಿದ್ದ ಈ ಸ್ಥಳದ ಮಹತ್ವವನ್ನು ಸ್ಮರಿಸಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಮಾಡುತ್ತಿರುವ ನಾವೀನ್ಯತೆ ಹಾಗೂ ಸೃಜನಶೀಲ ಕೆಲಸಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಸಾಮಾಜಿಕ ಜಾಲತಾಣಗಳು ಮತ್ತು ಕಂಟೆಂಟ್ ರಚನೆಯಲ್ಲಿ ಯುವಜನತೆ ಎದುರಿಸುತ್ತಿರುವ ಸವಾಲುಗಳು ಹಾಗೂ ಹೊಸ ಅವಕಾಶಗಳ ಕುರಿತು ಅವರು ಯುವಕರೊಂದಿಗೆ ಸಮಾಲೋಚನೆ ನಡೆಸಿ, ಸದಾ ವಿನೂತನ ಆಲೋಚನೆಗಳೊಂದಿಗೆ ಮುನ್ನಡೆಯಲು ಪ್ರೇರೇಪಿಸಿದರು.

Tags:

error: Content is protected !!