Vijaypura

ಈ ಗಜಾನನ ಜಾಗೃತ — ಹರಕೆಗೆ ಫಲ; ಬೆಳ್ಳಿ ಮೋದಕ ಕಾಣಿಕೆ ನೀಡಿದ ಯುವತಿ

Share

ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದ ಗಜಾನನ ಮಹಾಮಂಡಳದಿಂದ ಪ್ರತಿಷ್ಠಾಪಿಸಲಾದ ವಿಘ್ನವಿನಾಶಕ ಶ್ರೀ ಗಣೇಶನಿಗೆ ಭಕ್ತಿಯ ಹರಕೆ ಹೊತ್ತಿದ್ದ ಯುವತಿಗೆ ಇದೀಗ ಹರಕೆ ಫಲಿಸಿದೆ. ಕುಮಾರಿ ವರ್ಷಾ ರಾಜು ಕೊರಳ್ಳಿ ಅವರು 25 ತೊಲೆ ಬೆಳ್ಳಿಯಿಂದ ಸುಂದರ ಮೋದಕ ಮಾಡಿಸಿ ಶ್ರೀ ಗಜಾನನನ ಪಾದಾರವಿಂದಗಳಿಗೆ ಸಮರ್ಪಿಸುವ ಮೂಲಕ ಹರಕೆ ತೀರಿಸಿದ್ದಾರೆ. ವಿಘ್ನಗಳನ್ನು ದೂರ ಮಾಡಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗಜಾನನನ ಕೃಪೆಗೆ ಇದೊಂದು ಸಾಕ್ಷಿ ಎಂಬ ಭಾವ ಭಕ್ತರಲ್ಲಿ ಮೂಡಿದೆ. ಭಕ್ತಿಯಿಂದ ಹೊತ್ತ ಹರಕೆ, ನಂಬಿಕೆಯಿಂದ ಮಾಡಿದ ಪ್ರಾರ್ಥನೆ ಫಲಿಸಿದ ಕ್ಷಣಕ್ಕೆ ಈ ಬೆಳ್ಳಿ ಮೋದಕ ಸಾಕ್ಷಿಯಾಗಿದೆ.

Tags:

error: Content is protected !!