ಮುಖ್ಯಮಂತ್ರಿ ಡಿಕೆಶಿಯವರು ಈ ಹಿಂದೆ ಸರ್ಕಾರ ಕಚೇರಿಗಳಲ್ಲಿ ನಿಗದಿ ಕಾನೂನು ಬದ್ಧ ಪೀಸ್ ಹೊರತುಪಡಿಸಿ ಯಾರೊಬ್ಬರು ಹತ್ತಿಪ್ಪತ್ತು ರೂಪಾಯಿ ನೀಡಬಾರದು ಎಂದು ಹೇಳಿದ್ದರು. ಆದರೆ ಈಗ ನಮ್ಮಗೆ ಹತ್ತಿಪ್ಪತ್ತು ಅಲ್ಲ ಕೋಟಿ ಲಕ್ಷ ಕೊಡಬೇಕು ಎಂಬುವುದು ಅರ್ಥವಾಗುತ್ತಿದೆ ಎಂದು ಹೇಳುವ ಮೂಲಕ ಸಿಎಂ ಅವರ ಹೇಳಿಕೆ ಬಿಜೆಪಿ ಮಾಜಿ ಶಾಸಕ ಅಮೃತ ದೇಸಾಯಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಹತ್ತಿಪ್ಪತ್ತು ರೂಪಾಯಿ ದೊಡ್ಡದಲ್ಲ, ಹೊಡೆದ್ರೆ ಕೋಟಿ ಲಕ್ಷವೇ ನೀಡಬೇಕು ಎನ್ನವುದಕ್ಕೆ ತಾಜಾ ಉದಹಾರಣೆಯಾಗಿ ನಮ್ಮ ಮುಂದೆ ಧಾರವಾಡ ತಹಶಿಲ್ದಾ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಈಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದಿದ್ದಾರೆ. ಸಿಎಂ ಅವರು ತಹಶೀಲ್ದಾರ್, ಡಿಸಿ ಕಚೇರಿಯಲ್ಲಿ ಯಾರೂ ಹತ್ತು ರೂಪಾಯಿ, ಕೊಡಂಗಿಲ್ಲ, ತಗೊಳಂಗಿಲ್ಲ, ಹತ್ತು ರೂಪಾಯಿ ಲೆಕ್ಕ ನಮಗ ಇವಾಗ ಗೊತ್ತಾಯ್ತು. ನಾವು ಅಧಿಕಾರದಲ್ಲಿದ್ದಾಗ ಹತ್ತ ರೂಪಾಯಿ ತಗೊಂಡಿಲ್ಲ ಅಂತ ನಮಗ ಖುಷಿ ಇದೆ. ನಮ್ಮ ಅವಧಿ ಒಳಗೆ ನಾವು ಹತ್ತು ರೂಪಾಯಿ ತಗೊಂಡಿದ್ರೇ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಜತೆಗೆ ಭ್ರಷ್ಟಾಚಾರ ಇಲ್ಲ ಅಂತ ನಾನು ಹೇಳೋದಿಲ್ಲ, ಭ್ರಷ್ಟಾಚಾರ ಇದ್ದರೂ ಇತಿಮಿತಿ ಒಳಗೆ ಇರಬೇಕು. ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿ ಖರಾಬ್ ತೆಗೆಯಲು ಬರಲ್ಲ ಅಂದಿದ್ರು ಇದೇ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್, ರೈತರಿಗೆ ಆಗಲ್ಲ ಅಂದಿದ್ದ. ಆದರೆ ಅದೇ ಖರಾಬ್ ತೆಗೆಯಲು ಕೋಟಿ ಹಣ ಪಡೆದು ತೆಗೆದಿದ್ದಾನೆ. ಈ ವ್ಯವಸ್ಥೆ ಸರಿಪಡಿಸುವಂತಹ ಕೆಲಸ ಆಗಬೇಕು. ಸಿಎಂ ಅವರು ಮಾದ್ಯಮಗಳಲ್ಲಿ ಅಷ್ಟೇ ಅಲ್ಲದೇ ವ್ಯವಸ್ಥೆ ಸರಿಮಾಡಬೇಕು ಎಂದು ಆಗ್ರಹಿಸಿದರು.
