ಇದು ನಮ್ಮ ಸರ್ಕಾರವಲ್ಲ; 7 ಕೋಟಿ ಜನರ ಸರ್ಕಾರ
ಪ್ರತಿಯೊಬ್ಬರಿಗೂ ಬದಲಾವಣೆಯ ರೂಪ ನೀಡುವುದೇ ನಮ್ಮ ಗುರಿ; ಸಿಎಂ ಡಿ.ಕೆ.ಶಿವಕುಮಾರ್

ಇದು 100 ದಿನಗಳ ಆಚರಣೆಯಲ್ಲ. ತಾವೂ ಮಾಜಿ ಸಿಎಂ ಸಿದ್ಧರಾಮಯ್ಯನವರು ನೀಡಿದ ಭರವಸೆಯನ್ನು ಪೂರ್ಣಗೊಳಿಸಲಾಗುತ್ತಿದೆ. ಇದು ಡಿ.ಕೆ.ಶಿವಕುಮಾರ ಸರ್ಕಾರವಲ್ಲ. ಇದು ಈ ನಾಡಿನ 7 ಕೋಟಿ ಜನತೆಯ ಸರ್ಕಾರವಾಗಿದೆ. ಪ್ರತಿ ಮನೆಗೂ ಕೂಡ ನಮ್ಮ ಸರ್ಕಾರದಿಂದ ಬದಲಾವಣೆಯ ರೂಪವನ್ನು ನೀಡಲಾಗುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ “ದೃಢ ಕರ್ನಾಟಕದ ಸಂಕಲ್ಪ: ಶತಕದ ಪಥ, ಪ್ರಗತಿಯ ರಥ” ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವರೆಗೆ ತಲುಪಿಸಲು ಶ್ರಮಿಸಿದ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಜನರ ರೈತರ ಬದುಕು ಬದಲಾಯಿಸಲು ರಾಜ್ಯ ಸರ್ಕಾರ ಪಣ ತೊಟ್ಟಿದೆ. ಇದು 100 ದಿನಗಳ ಆಚರಣೆಯಲ್ಲ. ತಾವೂ ಮಾಜಿ ಸಿಎಂ ಸಿದ್ಧರಾಮಯ್ಯನವರು ನೀಡಿದ ಭರವಸೆಯನ್ನು ಪೂರ್ಣಗೊಳಿಸಲಾಗುತ್ತಿದೆ. ಇದು ಡಿ.ಕೆ.ಶಿವಕುಮಾರ ಸರ್ಕಾರವಲ್ಲ. ಇದು ಈ ನಾಡಿನ 7 ಕೋಟಿ ಜನತೆಯ ಸರ್ಕಾರವಾಗಿದೆ. ಪ್ರತಿ ಮನೆಗೂ ಕೂಡ ನಮ್ಮ ಸರ್ಕಾರದಿಂದ ಬದಲಾವಣೆಯ ರೂಪವನ್ನು ನೀಡಲಾಗುತ್ತಿದೆ ಎಂದರು.
ಇನ್ನು ಡಿಸಿಎಂ ಜಿ. ಪರಮೇಶ್ವರ್ ಅವರು, ಕರ್ನಾಟಕ ಆಡಳಿತ ವ್ಯವಸ್ಥೆಯಲ್ಲಿ ಹೊಸ ಇತಿಹಾಸವನ್ನು ಬರೆಯಲಾಗುತ್ತಿದ್ದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರ್ನಾಟಕದ ಜನತೆಗೆ ಕಾಂಗ್ರೆಸ್ ಪಕ್ಷ ಹಲವಾರು ಜನಪರ ಕಾರ್ಯಕ್ರಮವನ್ನು ನೀಡಿದೆ. ಈ ಬಾರಿ 150 ವರ್ಷಗಳಲ್ಲಿ ಭೀಕರ ಬರಗಾಲ ಬಿದ್ದಿದ್ದು, ಸರ್ಕಾರ ಅದನ್ನು ನೀಗಿಸಲು ಪ್ರಯತ್ನವನ್ನು ಮಾಡುತ್ತಿದೆ. 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಿದ್ದು, ಇನ್ನು 100 ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದೆ. 100 ದಿನಗಳ ಈ ಕಾರ್ಯಕ್ರಮ ಒಂದು ಸಂಭ್ರಮೋತ್ಸವವಲ್ಲ. ಇದು ವಿರೋಧ ಪಕ್ಷಗಳಿಗೆ ನೀಡಿದ ತಕ್ಕ ಉತ್ತರ ಎಂದರು.
ಇದು ಡಿ.ಕೆ.ಶಿವಕುಮಾರ್ ನೇತೃತ್ವದ 100 ದಿನಗಳ ಸರ್ಕಾರದ ಸಂಭ್ರಮಾಚರಣೆಯಾಗಿರದೇ, ನಮ್ಮ ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಜನರ ಮುಂದಿಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಜನರು ಮಾಲೀಕರಾಗಿದ್ದು, ನಾವು ಜನರಿಗೆ ನೀಡಿದ ವಾಗ್ಧಾನಗಳನ್ನು ಪೂರೈಸುವ ದಾರಿಯಲ್ಲಿ ನಡೆಯವುದು ಬಹುಮುಖ್ಯ. ಸಮಾಜದಲ್ಲಿನ ಅಸಮಾನತೆ ತೆಗೆದು ಹಾಕಿ ಸಮಸಮಾಜವನ್ನು ನಿರ್ಮಿಸಬೇಕು. ಸಂವಿಧಾನದ ಆಶಯಗಳಂತೆ ನಡೆಯಬೇಕು ಎಂದರು. ಅಲ್ಲದೇ ಬರಗಾಲದ ವರದಿ ನೀಡಿದರೂ ಪರಿಹಾರ ನೀಡದ ಕೇಂದ್ರ ಸರ್ಕಾರ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ’ ‘ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಿಎಂ ಡಿಕೆ ಶಿವಕುಮಾರ್ ಅವರು ವಿವಿಧ ಯೋಜನೆಗಳ ಫಲಾನುಭವಿಗಳ ಕುಶಲೋಪರಿ ವಿಚಾರಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಜಿ ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ ಜೆ ಜಾರ್ಜ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಬಾಲಕೃಷ್ಣ, ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡ, ಎಸ್ ಎಸ್ ಮಲ್ಲಿಕಾರ್ಜುನ್, ಯತೀಂದ್ರ ಸಿದ್ದರಾಮಯ್ಯ, ಯು ಟಿ ಖಾದರ್, ಅಜಯ್ ಸಿಂಗ್, ಕೆ ಹೆಚ್ ಮುನಿಯಪ್ಪ, ಜಮೀರ್ ಅಹ್ಮದ್, ಮಧು ಬಂಗಾರಪ್ಪ, ಬೈರತಿ ಸುರೇಶ್, ಬಿಡಿಎ ಅಧ್ಯಕ್ಷರಾದ ಎನ್ ಎ ಹ್ಯಾರಿಸ್, ಸಂಸದ ಜಿ ಸಿ ಚಂದ್ರಶೇಖರ್ ಸೇರಿದಂತೆ ಸಚಿವರು, ಸಂಸದರು, ಶಾಸಕರು ಮತ್ತಿತರರು ಪಾಲ್ಗೊಂಡರು. ಇದಕ್ಕೂ ಮೊದಲು ಗ್ಯಾರಂಟಿ ಯೋಜನೆಗಳ ಮಾಹಿತಿ ಒಳಗೊಂಡ ಎಕ್ಸಿಬಿಷನ್ ಅನ್ನು ಗಣ್ಯರು ವೀಕ್ಷಿಸಿದರು.
