State

ಅಹಿಂದ್ ನಾಯಕರ ಬಿರುಕು ಹೆಚ್ಚಾದರೇ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್

Share

ಅಹಿಂದ್ ನಾಯಕರ ಬಿರುಕು ಹೆಚ್ಚಾದರೇ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಅಹಿಂದ್ ಲೀಡ್ ಯಾರೂ ಬೇಕಾದರೂ ತೆಗೆದುಕೊಳ್ಳಬಹುದು. ನಾವೇ ಆಗಬೇಕೆಂದಿಲ್ಲ. ಜನ ಒಪ್ಪಿದವರೇ ಅಹಿಂದ್ ನಾಯಕರು ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಸಿದ್ಧರಾಮಯ್ಯನವರ ಜೊತೆ ತಾವು ಹಾಗೂ ಪರಮೇಶ್ವರ ಒಂದಾಗಿದ್ದೀರಿ, ಆದರೀಗ ಬೇರೆಯಾಗಿದೆ ಎಂಬ ವಿಚಾರಕ್ಕೆ ಈಗೇನು ಅದರಿಂದ ಸಮಸ್ಯೆ ಉದ್ಭವಿಸಿಲ್ಲ. ಎಲ್ಲ ಮುಖಂಡರು ಚರ್ಚೆ ಮಾಡುತ್ತೇವೆ. ಅಹಿಂದ್ ಲೀಡ್ ಯಾರೂ ಬೇಕಾದರೂ ತೆಗೆದುಕೊಳ್ಳಬಹುದು. ನಾವೇ ಆಗಬೇಕೆಂದಿಲ್ಲ. ಜನ ಒಪ್ಪಿದವರೇ ಅಹಿಂದ್ ನಾಯಕರು ಎಂದರು.

ಇನ್ನು ಸಿದ್ಧರಾಮಯ್ಯ ಹಾಗೂ ತಮ್ಮ ನಡುವೆ ಯಾರಾದರೂ ಪಿತೂರಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರೂ ಮಾಡಿದ್ದಾರೆಂದು ಗೊತ್ತಿಲ್ಲ. ಸಿಟ್ಟು ಆಕ್ರೋಶ ಹೊರ ಹಾಕುವ ಅವಶ್ಯಕತೆಯಿಲ್ಲ. ಸಮಾಜಸೇವೆಯಷ್ಟೇ ನಮ್ಮ ಕೆಲಸ. ಪಕ್ಷ ಸರ್ಕಾರ ಅಧಿಕಾರ ನೀಡಿದ ಕೆಲಸವನ್ನು ಮಾತ್ರ ಮಾಡುತ್ತೇವೆ. ಅಹಿಂದ್ ನಾಯಕರ ಬಿರುಕು ಹೆಚ್ಚಾದರೇ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಕೆಲವರ ಉದ್ಧೇಶವು ಒಡದು ಹೋಗಬೇಕೆಂಬುದಾಗಿದೆ. ಅದನ್ನು ಮುಖಂಡರು ಅರಿತುಕೊಂಡು ಮುಂದೇ ಈ ರೀತಿ ನಡೆದುಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಬಾಂಧವ್ಯ ಮತ್ತು ಅಹಿಂದಕ್ಕೂ ಯಾವುದೇ ಸಂಬಂಧವಿಲ್ಲ. ಸಮಾಜಗಳು ಬೇರೆ ಬೇರೆಯಾಗಿ ಸಭೆ ನಡೆಸುವುದರಿಂದ ಹಿನ್ನಡೆಯಾಗುತ್ತದೆ ಎಂದೆನಿಲ್ಲ. ಎಲ್ಲದಕ್ಕೂ ಸಿದ್ಧರಾಮಯ್ಯನವರನ್ನು ಕರೆಯಲು ಸಾಧ್ಯವಾಗಲ್ಲ ಎಂದರು.ಜಾತಿ ಗಣತಿಯ ಸಮೀಕ್ಷೆ ಶೀಘ್ರದಲ್ಲೇ ಆಗಬೇಕೆಂಬುದು ನಮ್ಮ ಒತ್ತಾಯ ಕೂಡವಾಗಿದೆ. ಪೂರ್ಣ ವರದಿ ಬಂದ ಬಳಿಕ ಜಾರಿ ಮಾಡುವುದು ಸರ್ಕಾರದ ಜವಾಬ್ದಾರಿ ಎಂದರು.

Tags:

error: Content is protected !!