ಕ್ರೀಡಾ ಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸ ಬೇಕು ಎಂದು ನಿವೃತ್ತ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಬಿ ಆರ್ ಮಠಪತಿ ಹೇಳಿದರು.


ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಯುವ ಸಬಲೀಕರಣ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹುಕ್ಕೇರಿ ಯವರ ಆಶ್ರಯದಲ್ಲಿ ಜರುಗಿದ 2026 – 27 ನೇ ಹುಕ್ಕೇರಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಶಿವಮಹಿಮಾ ಮಠಪತಿ ಯವರ ಅದ್ಯಕ್ಷತೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬಿ ಆರ್ ಮಠಪತಿ ಕ್ರೀಡಾ ದ್ವಜಾರೋಹಣ ನೇರವೇರಿಸಿ ಪ್ರತಿಜ್ಞಾವಿಧಿ ಭೋದಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಠಪತಿ ಕ್ರೀಡಾ ಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕು ಎಂದು ಕರೆ ನೀಡಿದರು.

ನಂತರ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ ಐ ಕೋಟಿವಾಲೆ ಕ್ರೀಡಾ ಜ್ಯೋತಿ ಬರಮಾಡಿಕೊಂಡು ಕ್ರೀಡೆಗಳಿಗೆ ಚಾಲನೆ ನೀಡಿದರು.
ನಂತರ ಯುವಕ, ಯುವತಿಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾದರು.
ಜೂಡೋ ಕ್ರಿಡಾಪಟು ಹಾಗೂ ತಾಲೂಕಾ ಅನುಷ್ಠಾನಧಿಕಾರಿ ಕುತುಜಾ ಮುಲ್ತಾನಿ ಮಾತನಾಡಿ ಹುಕ್ಕೇರಿ ನಗರದಲ್ಲಿ ಜರುಗಿದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾದ ಪಟುಗಳಿಗೆ ಅಭಿನಂದನೆ ಹಾಗೂ ಕ್ರೀಡಾಕೂಟ ಯಶಸ್ವಿಗೆ ಸಹಕರಿಸಿದ ತಾಲೂಕಾ ಮಟ್ಟದ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತರಬೇತಿದಾರರಾದ ರೋಹಿಣಿ ಪಾಟೀಲ, ಬಿ ಎನ್ ಚೌಗಲಾ ಹಾಗೂ ನಿರ್ಣಾಯಕರಾಗಿ ಬಿರೇಶ ಶಿವಣ್ಣಗೋಳ,ಸಂಗಮೇಶ ಶಿವಣ್ಣಗೋಳ,ಬಿರೇಶ ಕಾಂಬಳೆ,ಮುಬಾರಕ ಸನದಿ,ರಾಜೇಂದ್ರ ನರಸಾಯಿ,ಮಹಾಂತೇಶ ಹಲಕರ್ಣಿ,ಎ.ಎನ್ ಕಾಮೋಜಿ,ಮಹಾದೇವಿ ಪಾಟೀಲ,ಸಂಜು ಹೊನಕುಪ್ಪಿ, ಬಪುಲ್ ಖೋತ ಕಾರ್ಯ ನಿರ್ವಹಿಸಿದರು.
ತಾಲೂಕಾ ಕ್ರೀಡಾ ಸಂಯೋಜಕ ಚಂದ್ರಕಾಂತ ವಾರಕರಿ,ಹಾಲಪ್ಪ ಮಗದುಮ್ಮ ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
