Kagawad

ಶಿರಗುಪ್ಪಿಯ ಶ್ರೀ ಮಹಾವೀರ ಸಹಕಾರಿಯ ಶಿರಗುಪ್ಪಿ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ: ಸೋಮವಾರ ನೂತನ ಕಟ್ಟಡ ಉದ್ಘಾಟನೆ;ಮಹಾವೀರ ನೀಲಜಗಿ

Share

ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸೇವೆ

ಸೋಮವಾರದಂದು ನೂತನ ಕಟ್ಟಡದ ಉದ್ಘಾಟನೆ

ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಪಾರದರ್ಶಕತೆ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಹುಕ್ಕೇರಿಯ ಶ್ರೀ ಮಹಾವೀರ ಮಲ್ಟಿಪರಪಸ್ ಸೌಹಾರ್ದ ಸಹಕಾರಿಯು ಪ್ರಗತಿಪಥದಲ್ಲಿ ಸಾಗುತ್ತಿದ್ದು, ಇದರ ಶಿರಗುಪ್ಪಿ ಶಾಖೆಯು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಸೋಮವಾರ ದಿನ 7ರಂದು ನೂತನ ಕಟ್ಟಡದ ಉದ್ಘಾಟನೆ ನೆರವೇರಲಿದೆ ಎಂದು ಅಧ್ಯಕ್ಷ ಮಹಾವೀರ ನೀಲಜಗಿ ಮಾಹಿತಿ ನೀಡಿದರು.

ಶನಿವಾರ ಶಿರಗುಪ್ಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಕಾರಿಯು ಒಟ್ಟು 16 ಶಾಖೆಗಳನ್ನು ಹೊಂದಿದ್ದು, ಅದರಲ್ಲಿ 7 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 2 ಶಾಖೆಗಳಿಗೆ ನಿವೇಶನಗಳನ್ನು ಖರೀದಿ ಮಾಡಲಾಗಿದೆ. ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಶಿರಗುಪ್ಪಿಯಲ್ಲಿ ವಿಶಾಲವಾದ ನೂತನ ಕಟ್ಟಡದಲ್ಲಿ ಸುಸಜ್ಜಿತ ಲಾಕರ್ ಸೌಲಭ್ಯ ಹೊಂದಿರುವ ಶಾಖೆಯು ಇದೀಗ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಇದರ ಜೊತೆಗೆ ನಮ್ಮ ಸಹಕಾರಿಯು ಕೇವಲ ಬ್ಯಾಂಕಿಂಗ್ ಸೇವೆಗೆ ಸೀಮಿತವಾಗದೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದೆ. ಸದಸ್ಯರಿಗೆ ಉಚಿತ ಕಣ್ಣಿನ ಚಿಕಿತ್ಸೆ, ಹೃದಯ ಸಂಬಂಧಿ ಚಿಕಿತ್ಸೆಗೆ ಸಹಕಾರ ಹಾಗೂ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ನಮ್ಮ ಸಹಕಾರಿಯು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ ಒಟ್ಟು 3,042 ಸದಸ್ಯರನ್ನು ಹೊಂದಿದೆ. ಅದರಂತೆ ₹351 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹275 ಕೋಟಿ ಸಾಲ ವಿತರಣೆ ಮಾಡಿ, ₹4 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದರು.

ಈ ವೇಳೆ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕ ಬಾಹುಬಲಿ ಸೊಲ್ಲಾಪೂರೆ, ಶಿರಗುಪ್ಪಿ ಶಾಖೆಯ ರಾಜು ಶಿರಗುಪ್ಪೆ, ಧರಣೇಂದ್ರ ಶೆಟ್ಟಿ, ಸಚೀನ ಯಮಕನಮರಡಿ, ಶಿರಗುಪ್ಪಿ ಶಾಖಾ ಕಾರ್ಯದರ್ಶಿ ರವೀಂದ್ರ ಜಯರಾಮಗೋಳ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!