Kagawad

ಶಿವಠಾಣ ಹೈಸ್ಕೂಲ್ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

Share

ಖಾನಾಪುರ ತಾಲೂಕಿನ ಶಿವಠಾಣದ ಶ್ರೀ ರವಳನಾಥ ಹೈಸ್ಕೂಲ್ ವಿದ್ಯಾರ್ಥಿಗಳು ಲೊಂಡಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ

.ವಾಲೀಬಾಲ್ (ಹುಡುಗರು), ಕಬಡ್ಡಿ (ಹುಡುಗಿಯರು) ಹಾಗೂ 4×100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದರೆ, ವೈಯಕ್ತಿಕ ವಿಭಾಗದಲ್ಲಿ ಲಕ್ಷ್ಮಣ್ ಕೋಲಕರ್ (ಶಾಟ್‌ಪುಟ್, ಡಿಸ್ಕಸ್ ಥ್ರೋ), ದೀಪಾ ಶಿರೋಡ್ಕರ್ (ಲಾಂಗ್ ಜಂಪ್) ಮತ್ತು ಶ್ರೇಯಾ ಗಾವಡೆ (800 ಮೀಟರ್ ಓಟ) ಸೇರಿದಂತೆ ಹಲವು ಕ್ರೀಡಾಪಟುಗಳು ಪ್ರಥಮ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ದೈಹಿಕ ಶಿಕ್ಷಕ ಪಿ.ಟಿ. ಚೋಪಡೆ ಅವರ ಮಾರ್ಗದರ್ಶನ ಮತ್ತು ಮುಖ್ಯೋಪಧ್ಯಾಯರು ಹಾಗೂ ಶಿಕ್ಷಕರ ಸಹಕಾರದಿಂದ ಸಿಕ್ಕ ಈ ಯಶಸ್ಸಿಗೆ ತಾಲೂಕಿನಾದ್ಯಂತ ಅಭಿನಂದನೆಗಳು ಹರಿದುಬರುತ್ತಿವೆ.

Tags:

error: Content is protected !!