bagalkot

ಬಾದಾಮಿ ಬನಶಂಕರಿ ದೇಗುಲದ ಪುಷ್ಕರ್ಣಿ ಬಳಿ ಪ್ರತ್ಯಕ್ಷವಾದ 12 ಅಡಿ 25 ಕೆಜಿ ತೂಕದ ಹೆಬ್ಬಾವು!!!

Share

ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಬಾದಾಮಿ ಬನಶಂಕರಿ ದೇಗುಲದ ಪುಷ್ಕರ್ಣಿ ಬಳಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ತಡರಾತ್ರಿ ಕಾಣಿಸಿಕೊಂಡ ಈ ಹಾವನ್ನು ಉರಗ ರಕ್ಷಕರು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಬನಶಂಕರಿ ದೇವಸ್ಥಾನದ ಹೊಂಡದ ಬಳಿ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಸುಮಾರು 12 ಅಡಿ ಉದ್ದ ಹಾಗೂ 25 ಕೆಜಿ ತೂಕದ ಬೃಹತ್ ಹೆಬ್ಬಾವು ಪ್ರತ್ಯಕ್ಷಗೊಂಡು ಭಕ್ತರಲ್ಲಿ ಭೀತಿ ಮೂಡಿಸಿತ್ತು. ತಕ್ಷಣವೇ ಸ್ಥಳೀಯರು ಉರಗ ರಕ್ಷಕ ಸ್ನೇಕ್ ಮಹಾಂತೇಶ ಅವರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಅವರು ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ಬೃಹತ್ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದರು. ಈ ಹಿಂದೆ ಇದೇ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ಹೆಬ್ಬಾವಿನ ಮರಿಗಳು ಕಾಣಿಸಿಕೊಂಡಿದ್ದನ್ನು ಸ್ಮರಿಸಬಹುದು. ಸಕಾಲಕ್ಕೆ ಕಾರ್ಯಪ್ರವೃತ್ತರಾದ ಸ್ನೇಕ್ ಮಹಾಂತೇಶ ಅವರು ಸೆರೆಹಿಡಿದ ಹೆಬ್ಬಾವನ್ನು ಬಳಿಕ ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಒಯ್ದು ಬಿಡುವ ಮೂಲಕ ಜನರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿದ್ದಾರೆ.

Tags:

error: Content is protected !!