Belagavi

ಬೆಳಗಾವಿಯ ಇಸ್ಕಾನ್’ನಲ್ಲಿ ಭಕ್ತಿಭಾವದ ಶ್ರೀಕೃಷ್ಣ ಜನ್ಮಾಷ್ಠಮಿ…

Share

ಬೆಳಗಾವಿಯ ಟಿಳಕವಾಡಿ ಇಸ್ಕಾನ್ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಸಡಗರ ಮನೆ ಮಾಡಿದೆ.

ಬೆಳಗಾವಿಯ ಟಿಳಕವಾಡಿಯಲ್ಲಿರುವ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲ್ಪಡುತ್ತಿದೆ. ಮಂದಿರದ ಆವರಣದಲ್ಲಿ ರಾರಾಜಿಸುತ್ತಿರುವ ‘ರಾಧಾ ಗೋಕುಲಾನಂದ’ ದೇವರ ವಿಗ್ರಹಕ್ಕೆ ಜನ್ಮಾಷ್ಟಮಿ ನಿಮಿತ್ತ ವಿಶೇಷ ಹೂವಿನ ಅಲಂಕಾರವನ್ನು ಕೈಗೊಳ್ಳಲಾಗಿದೆ. ಮಾರುಕಟ್ಟೆಯಿಂದ ಹೂವುಗಳನ್ನು ತರಿಸದೆ, ಸ್ವತಃ ತೋಟದಿಂದ ತಂದ ಹೂವುಗಳಿಂದ ಹಾಗೂ ಭಕ್ತರ ಸಹಕಾರದೊಂದಿಗೆ ಸುಂದರವಾದ ಮಂಟಪ ಮತ್ತು ಮಾಲೆಗಳನ್ನು ನಿರ್ಮಿಸಲಾಗಿದೆ.

ಜನ್ಮಾಷ್ಟಮಿ ಅಂಗವಾಗಿ ಭಕ್ತರಿಗೆ ಮೂರು ದಿನಗಳ ಕಾಲ ಸರಣಿ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ. ವಿಶೇಷ ಅಭಿಷೇಕ, ಗೋಪೂಜೆ, ಭಗವದ್ಗೀತೆ ಪ್ರವಚನ, ಮಹಾ ಆರತಿ, ನಾಮಕೀರ್ತನೆ ಹಾಗೂ ಪ್ರಸಾದ ವಿತರಣೆಯಂತಹ ಪವಿತ್ರ ಕಾರ್ಯಕ್ರಮಗಳು ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿವೆ. ಭಕ್ತ ಸಮೂಹವು ಭಕ್ತಿಯಿಂದ ಪಾಲ್ಗೊಳ್ಳಲು ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಕಾರ್ಯಕ್ರಮದ ಮುಕ್ತಾಯದ ದಿನಗಳಂದು ಪ್ರಭುಪಾದರ ವ್ಯಾಸ ಪೂಜೆ ಹಾಗೂ ಕಳೆಕಟ್ಟುವ ದಹಿ ಹಂಡಿ ಕಾರ್ಯಕ್ರಮವೂ ಅತ್ಯಂತ ಉತ್ಸಾಹದಿಂದ ಜರುಗಲಿದೆ. ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಗೌರಾಂಗ ಪ್ರಸಾದ್ ದಾಸ್ ವಿಶೇಷವಾಗಿ ಆಹ್ವಾನಿಸಿದ್ದಾರೆ.

ಈ ವೇಳೆ ಅಪಾರ ಸಂಖ್ಯೆಯಲ್ಲಿ ಶ್ರೀಕೃಷ್ಣನ ಭಕ್ತರು ಪ್ರಭುವಿನ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

Tags:

error: Content is protected !!