Belagavi

1 ಲಕ್ಷಕ್ಕಿಂತ ಹೆಚ್ಚು ಕರ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ; ಮಹಾಪಾಲಿಕೆ ಆಯುಕ್ತ ಕಾರ್ತಿಕ್ ಎಂ.

Share

ಮೊದಲ ಹಂತದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕರ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಪಾಲಿಕೆಯ ಆದಾಯ ಹೆಚ್ಚಳದಿಂದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ.ಕರ ವಸೂಲಾತಿ ನಿರ್ದಿಷ್ಟ ಗುರಿ ತಲುಪಬೇಕಾದ ಹಿನ್ನೆಲೆಯಲ್ಲಿ ಕಂದಾಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚುರುಕಿ ನಿಂದ ಕಾರ್ಯ ನಿರ್ವಹಿಸಬೇಕು. ಎರಡನೇ ಹಂತದಲ್ಲಿ ರೂ.50,000 ಕ್ಕಿಂತಲೂ ಹೆಚ್ಚು ಬಾಕಿ ಉಳಿಸಿಕೊಂಡವರಿಗೂ ನೋಟಿಸ್ ಜಾರಿ ಮಾಡಬೇಕಲ್ಲದೇ ಕರ ವಸೂಲಿಗಾರರು ಹಾಗೂ ಕಂದಾಯ ನಿರೀಕ್ಷಕರು ವಾರ್ಡ್ಗಳಲ್ಲೇ ಇದ್ದು, ತಂಡಗಳನ್ನು ರಚಿಸಿಕೊಂಡು
ಕರ ವಸೂಲಾತಿಗೆ ವೇಗ ನೀಡಬೇಕು ಎಂದರು.

Tags:

error: Content is protected !!