Dharwad

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಹುದ್ದೆಯ ಹಗ್ಗಜಗ್ಗಾಟ ಅಂತ್ಯ

Share

ಕಳೆದ ಒಂದು ವಾರದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಯಾರು ಬರುತ್ತಾರೆ ಅನ್ನುವ ಗೊಂದಲಕ್ಕೆ ಈಗ ಕೊನೆಗೂ ಉತ್ತರ ಸಿಕ್ಕಿದೆ. ಇಂದು ನೂತನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿದ್ದ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿ, ಇದೇ ಸ್ಥಳಕ್ಕೆ ಬೆಳಗಾವಿ ಕಮಿಷನರ್ ಐಪಿಎಸ್ ಭೂಷಣ್ ಬೋರಸೆ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಆದರೆ ಭೂಷಣ್ ಅವರನ್ನು ಬೆಳಗಾವಿ ಜನರು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದರು. ಅದಕ್ಕೆ ಎನ್. ಶಶಿಕುಮಾರ್ ಅವರು ಮುಂದುವರೆದಿದ್ದರು. ಒಂದು ವಾರದಿಂದ ಭೂಷಣ್ ಬೋರಸೆ ಹುಬ್ಬಳ್ಳಿ-ಧಾರವಾಡಕ್ಕೆ ಬರುತ್ತಿಲ್ಲ ಎಂದು ಪಿಸುಮಾತುಗಳು ನಡೆದಿದ್ದವು. ಈಗ ಆ ವದಂತಿಗಳಿಗೆ ಉತ್ತರ ಸಿಕ್ಕಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೂತನ ಕಮಿಷನರ್ ಭೂಷಣ್ ಬೋರಸೆ ಇಂದೇ ಅಧಿಕಾರ ವಹಿಸಿಕೊಂಡಿದ್ದಾರೆ.

Tags:

error: Content is protected !!