ಈ ಜಿಲ್ಲೆ ಬರ ಪೀಡಿತ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದೆ. ಈ ಜಿಲ್ಲೆಯ ಬಹುತೇಕ ತಾಂಡಾ ಸೇರಿದಂತೆ ಗ್ರಾಮಗಳ ಜನ ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋಗುತ್ತಾರೆ. ಆದರೆ ಈಗ ಸರ್ಕಾರದ ಯೋಜನೆ ಗುಳೇ ಹೋಗುವದನ್ನು ತಪ್ಪಿಸಿ ಅವರಿದ್ದ ಜಾಗದಲ್ಲೇ ಉದ್ಯೋಗ ಒದಗಿಸಿದೆ. ಹಾಗಾದರೆ ಅದ್ಯಾವ ಯೋಜನೆ..? ಶಾಶ್ವತ ಬರ ಪೀಡಿತ ಪ್ರದೇಶ ಎಂಬ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆಯಾವದು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ವಾಯ್ಸ 1 : ಹೌದು ಶಾಶ್ವತ ಬರ ಪೀಡಿತ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆ ವಿಜಯಪುರ. ಈ ಬಾರಿ ಕೂಡಾ ಜಿಲ್ಲೆಯಲ್ಲಿ ಬರ ತಾಂಡವ ಆವರಿಸಿದೆ, ಒಂದೆಡೆ ರೈತರು ಬರಗಾಲದಿಂದ ತತ್ತರಿಸಿ ಹೋದರೆ, ಇನ್ನೋಂದೆಡೆ ಬರಗಾಲದ ಹಿನ್ನಲೆಯಲ್ಲಿ ಹಳ್ಳಿಗಳಲ್ಲಿ ಕೆಲಸ ಸಿಗದೇ ಉದ್ಯೋಗ ಅರಸಿ ಅನ್ಯ ಜಿಲ್ಲೆ ಸೇರಿದಂತೆ ಅನ್ಯ ರಾಜ್ಯಗಳಿಗೆ ಗುಳೇ ಹೋಗುತ್ತಿದ್ದವರಿಗೆ ಸರ್ಕಾರ ನೆರವಿನ ಹಸ್ತ ಚಾಚಿದೆ. ಕೇಂದ್ರ ಸರ್ಕಾರದ ವಿಬಿಜಿರಾಮ್ ಜಿ ಯೋಜನೆ ಗುಳೇ ಹೋಗುವವರಿಗೆ ವರದಾನವಾಗಿದೆ. ತಮ್ಮ ಹಳ್ಳಿ, ಗ್ರಾಮಗಳ ಬಳಿಯೇ ಉದ್ಯೋಗ ಪಡೆದು ಗುಳೇ ಹೋಗುವದು ತಪ್ಪಿದೆ…
ವಿಜಯಪುರ ತಾಲೂಕಿನ ಹಡಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 41 ರ 216 ಎಕರೆ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ವಿಬಿಜಿರಾಮ್ ಜಿ ಯೋಜನೆಯಡಿ ಟ್ರೆಂಚ್ (ತಗ್ಗು ತೋಡುವದು) ಕಾಮಗಾರಿಯಲ್ಲಿ ಕೂಲಿಕಾರರು ತೊಡಗಿಕೊಂಡಿದ್ದಾರೆ. 140 ಜನರ ಕೂಲಿಕಾರರಲ್ಲಿ 122 ಜನ ಮಹಿಳೆಯರು ಹಾಗೂ 18 ಜನ ಪುರುಷರು ಕಾಮಗಾರಿಯಲ್ಲಿ ತೊಡಗಿ ಕೊಂಡಿದ್ದಾರೆ. ವಿಬಿಜಿರಾಮ್ ಜಿ ಯೋಜನೆಯಡಿ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ. ಇನ್ನೂ ಎಲ್ಲ ಮೂಲಭೂತ ಸೌಕರ್ಯ ಒದಗಿಸಿ ಕೂಲಿ ಒದಗಿಸಲಾಗಿದೆ…
ಶಾಶ್ವತ ಬರ ಪೀಡಿತ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡ ಜಿಲ್ಲೆಯಲ್ಲೀಗ ಸರ್ಕಾರದ ಕಾಮಗಾರಿ ವರದಾನವಾಗಿದ್ದು, ಜಿಲ್ಲೆಯ ಬಹುತೇಕ ಗ್ರಾಮ ಹಾಗೂ ತಾಂಡಾಗಳ ಜನರಿಗೆ ಗುಳೇ ಹೋಗುವದನ್ನು ತಪ್ಪಿಸಿದ್ದು ನಿಜಕ್ಕೂ ಮಾದರಿ ಕಾರ್ಯವಾಗಿದೆ…
