Chikkodi

ಶಮನೇವಾಡಿಯ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Share

ಚಿಕ್ಕೋಡಿ:ಶಮನೇವಾಡಿ ಸ್ಥಳೀಯ ಎ. ಜಿ. ಎಮ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ‘ರಾಷ್ಟ್ರೀಯ ಕ್ರೀಡಾ ದಿನಾಚರಣೆ’ಯನ್ನು ಶ್ರದ್ಧಾ-ಉತ್ಸಾಹಗಳಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಜಯ ಅಂಕಲಿ ಕ್ರೀಡೆಗಳಲ್ಲಿ ಸೋಲು-ಗೆಲುವುಗಳಿಗಿಂತ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಸತತ ಅಭ್ಯಾಸವೇ ಕ್ರೀಡಾಪಟುವಿನ ಯಶಸ್ಸಿನ ಗುಟ್ಟು. ಮೇಜರ್ ಧ್ಯಾನಚಂದ್ ಅವರು ರಾತ್ರಿಯ ವೇಳೆ ಚಂದ್ರನ ಬೆಳಕಿನಲ್ಲಿ ಕಠಿಣ ಅಭ್ಯಾಸ ನಡೆಸಿ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಸತತ ಮೂರು ಬಾರಿ ಹಾಕಿ ಚಿನ್ನದ ಪದಕ ತಂದುಕೊಟ್ಟ ಮಹಾನ್ ಸಾಧಕ,” ಎಂದು ಬಣ್ಣಿಸಿದರು.

ಇದೇ ವೇಳೆ ಧ್ಯಾನಚಂದ್ ಅವರ ದೇಶಭಕ್ತಿಯನ್ನು ಸ್ಮರಿಸಿದ ಅವರು, “‘ನನ್ನನ್ನು ಮುಂದೆ ತರುವುದು ದೇಶದ ಜವಾಬ್ದಾರಿಯಲ್ಲ, ಬದಲಿಗೆ ದೇಶವನ್ನು ಮುಂದೆ ತರುವುದು ನನ್ನ ಜವಾಬ್ದಾರಿ’ ಎಂದು ಸ್ವತಃ ಹಿಟ್ಲರನಿಗೇ ಪ್ರತ್ಯುತ್ತರ ನೀಡಿದ ಮಹಾನ್ ದೇಶಪ್ರೇಮಿ ಧ್ಯಾನಚಂದ್. ಪ್ರಸ್ತುತ ಕೇಂದ್ರ ಸರ್ಕಾರವೂ ಸಹ ‘ಖೇಲೋ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ ಯೋಜನೆಗಳ ಮೂಲಕ ಯುವ ಪೀಳಿಗೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ದೈಹಿಕ ನಿರ್ದೇಶಕರಾದ ರವಿ ವಾಳಕೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಡಾ. ಸಚೀನ ಮೆಕ್ಕಳಕಿ ಅವರು ಧನ್ಯವಾದ ಸಮರ್ಪಿಸಿದರು.

ಈ ಕ್ರೀಡಾ ದಿನಾಚರಣೆಯ ಸಮಾರಂಭದಲ್ಲಿ ಕಾಲೇಜಿನ ಪ್ರಮುಖರಾದ ಡಾ. ಶಶಿಕಾಂತ ವಾಳಕೆ, ಕೆ. ಆರ್. ಪಾಟೀಲ, ಪ್ರಶಾಂತ ಶೇಡಬಾಳಕರ, ಅಭಿಜಿತ ಅಕಿವಾಟೆ, ಅಶ್ವಿನಿ ಫರಾಳದ, ಸ್ನೇಹಾ ವಾಳಕಿ, ವೈಶ್ಣವ ಶೆಗಳೆ, ಅಶ್ವಿನಿ ಮೊನಾಚಾರ್ಯ, ರಾಣಿ ಸುಟುರೆ, ಮುತ್ತಣ್ಣಾ ಗೊಳಪ್ಪಗೋಳ, ಪಿರಗೌಡಾ ಹುಳಿಕೊಪ್ಪೆ, ಕೈಫ್ ಮುಲ್ಲಾ, ಶ್ವೇತಾ ಹವಾಲ್ದಾರ, ಕಾವೇರಿ ಕಡೆಮಣಿ, ಸ್ವಯಂ ಶಾಮ್, ಕಾಡೆಶ ಕಲಾದಗಿ, ಜ್ಞಾನೇಶ್ವರ ನಾಯಿಕ, ಸುಪ್ರಿಯಾ ಗೊಳಪ್ಪಗೋಳ, ಮಾಧುರಿ ಬೊರಗಾಂವೆ, ಅರುಣಾ ಮಾಳಗೆ, ಪ್ರತಿಭಾ ಖೋತ ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!