State

ಕಾಂಗ್ರೆಸನ್ನು ಎದುರಿಸುವ ಶಕ್ತಿ ಬಿಜೆಪಿಗಿಲ್ಲ …ಸದನದಲ್ಲಿ ಗೂಂಡಾವರ್ತನೆ ತೋರ್ತಿದ್ದಾರೆ; ಸಿಎಂ ಡಿ.ಕೆ.ಶಿವಕುಮಾರ್

Share

ಕಾಂಗ್ರೆಸನ್ನು ಎದುರಿಸುವ ಶಕ್ತಿ ವಿಪಕ್ಷ ಬಿಜೆಪಿಗಿಲ್ಲ. ಸದನದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಬದಲೂ ಗೂಂಡಾ ವರ್ತನೆ ತೋರುತ್ತಿದ್ದಾರೆಂದು ಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ವಿರೋಧ ಪಕ್ಷಗಳು ಕೈಗೊಳ್ಳುತ್ತಿರುವ ಪ್ರತಿಭಟನೆಗಳು ಮತ್ತು ಹೋರಾಟಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಏನು ಬೇಕಾದರೂ ಪ್ರತಿಭಟನೆ ಅಥವಾ ಹೋರಾಟ ಮಾಡಲಿ, ಅದಕ್ಕೆ ನಮ್ಮ ವಿರೋಧವಿಲ್ಲ; ಆದರೆ ಅವರು ಈಗ ಮಾಡುತ್ತಿರುವುದು ಗುಂಡಾಗಿರಿ. ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ. ಕಾಂಗ್ರೆಸ್ ಪಕ್ಷವನ್ನು ಫೇಸ್ ಮಾಡಲೂ ಅವರಲ್ಲಿ ಶಕ್ತಿಯಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಬೈಟ್
ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಶಾಸಕರು ಹಾಗೂ ನಾಯಕರು ಆಯ್ಕೆಯಾಗಿರುವುದನ್ನು ಸಹಿಸದ ವಿರೋಧ ಪಕ್ಷಗಳು, ರಾಜಕೀಯ ದುರುದ್ದೇಶದಿಂದ ಇಂತಹ ಕೃತ್ಯಗಳಲ್ಲಿ ತೊಡಗಿವೆ ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ಸೌಹಾರ್ದಯುತ ವಾತಾವರಣವನ್ನು ಹಾಳು ಮಾಡಲು ಮುಂದಾಗಿರುವವರ ವಿರುದ್ಧ ಮಾಧ್ಯಮದವರೂ ಕೂಡ ದೇಶದಾದ್ಯಂತ ಇರುವ ವಿವಿಧ ಪ್ರಕರಣಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಇದೇ ವೇಳೆ ಸಿಎಂ ಆದ ಬಳಿಕ ಅದಾನಿ ಅವರು ಸೌಜನ್ಯಕ್ಕೆ ಬಂದು ಭೇಟಿಯಾಗಿರುವುದಾಗಿ ತಿಳಿಸಿದರು.

Tags:

error: Content is protected !!