ಸಚಿವ ಬಿ ನಾಗೇಂದ್ರ ಅವರು ಮೇಲೆ ಭ್ರಷ್ಟಾಚಾರದ ಕೇಸ್ ಇದೆ. ಈಗ ಅವರು ಮತ್ತೆ ಮಂತ್ರಿಯಾಗಿದ್ದರೆ. ಆದರೆ ನಾಗೇಂದ್ರವರು ಮಂತ್ರಿಯಾಗುವ ಮೊದಲೇ ರಾಜ್ಯಪಾಲರಿಗೆ ಸಿಬಿಐದವರು ಚಾರ್ಜ್ ಶೀಟ್ ಫೈಲ್ ಮಾಡಲು ಅನುಮತಿ ಕೇಳಿದ್ದಾರೆ. ಆದರೆ ಈ ವಿಚಾರ ಈಗ ಹೊರಗಡೆ ಬಂದಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಧಾರವಾಡದಲ್ಲಿ ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಗೇಂದ್ರವರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವ ಮಟ್ಟಿಗೆ ಹೋಗಿತ್ತಿದೆ ಎಂಬುವುದು ಗೊತ್ತಾಗುತ್ತಿದೆ. ಈ ಸಚಿವ ಸಂಪುಟ ವಿಸ್ತರಣೆ ಹಿಂದೆ ಪೇಮಿಂಟ್ ಕಥೆ ಎಂಬ ಆರೋಪವನ್ನು ನಮ್ಮ ವಿಪಕ್ಷ ನಾಯಕರು ಮಾಡಿದ್ದಾರೆ. ಕಾಂಗ್ರೆಸ್ ಗೆ ನೈತಿಕತೆಯ ಗಾಳಿ ಗಂಧ ಗೊತ್ತಿದ್ದರೆ ತಕ್ಷಣ ಅವರನ್ನ ಡ್ರಾಪ್ ಮಾಡಬೇಕು. ಇನ್ನೂ ಕೆಪಿಎಸ್ಸಿ ಅಧ್ಯಕ್ಷರ ಅಮಾನತ್ತು ವಿಚಾರ, ನಾನು ಮೊದಲೇ ಇದರ ಬಗ್ಗೆ ಮಾತಾಡಿದೇನೆ. ಮೊದಲೇ ವಾರ್ನಿಂಗ್ ಕೊಟ್ಟಿದ್ದೆ, ಬಹಳ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಹೇಳಿದ್ದೆ.
ಕಾಂಗ್ರೆಸ್ ಪಾರ್ಟಿ ಕಣ್ಮುಚ್ಚಿ ಕುಳಿತಿತ್ತು. ಈಗಲಾದರೂ ಎಚ್ಚೆತ್ತುಕೊಂಡಿದೆ. ತಡವಾದರೂ ಸಹ ಆಕ್ಷನ್ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ಅದನ್ನ ಸ್ವಾಯತ್ತ ಸಂಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಜತೆಗೆ ಒಂದೇ ಮಾತರಂ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ವಿರೋಧ ಮಾಡಿದ್ದಾರೆ. ಓಟ್ ಬ್ಯಾಂಕ್ ರಾಜಕೀಯಕ್ಕಾ ಮತ್ತು ತುಷ್ಟಿಕರಣ ರಾಜಕಾರಣಕ್ಕಾಗಿ ಯಾವ ಹಂತಕ್ಕೆ ಕಾಂಗ್ರೆಸ್ ಇಳಿಯುತ್ತದೆ ಅನ್ನೊದಕ್ಕೆ ತಾಜಾ ಉದಾಹರಣೆ ಇದೂ. ಈಗ ವಂದೇ ಮಾತರಂ ಪೂರ್ಣ ಪ್ರಮಾಣದಲ್ಲಿ ಹಾಡಬೇಕು ಎಂದು ಸಂಸತ್ತಿನಲ್ಲಿ ಕಾನೂನು ಮಾಡಿದಾಗ್ಯೂ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ..?. ಒಂದೇ ಮಾತರಂ ಹಾಡುತ್ತಲೇ ಸ್ವತಂತ್ರಕ್ಕಾಗಿ ಜೀವ ತ್ಯಾಗ ಮಾಡಿ ಜೋರಾಟಗಾರರಿಗೂ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ದೇಶವನ್ನು ಇಬ್ಬಾಗಿಸುವ ಷಡ್ಯಂತರ ನಡೆಯುತ್ತಿದೆ. ಇದರ ಭಾಗವಾಗಿ ಈ ಹಿಂದೆ ತುಕಡೆ ತುಕಡೆ ಕರೆಂಗೆ, ಇನ್ ಶಾ ಅಲ್ಲಾ ಘೋಷಣೆ ಕೇಳಿ ಬಂದಿವೆ. ಈ ಘೋಷಣೆಗಳಿಗೂ ಕಾಂಗ್ರೆಸ್ ಬೆಂಬಲ ನೀಡಿತ್ತು. ಕಾಂಗ್ರೆಸ್ನ ಈ ನಡೆಗಳೇ ಹೇಳುತ್ತವೆ, ತುಷ್ಟಿಕರಣ ಪರಾಕಷ್ಟೆ ಎಷ್ಟೀದೆ ಅಂತಾ. ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ವಂದೇ ಮಾತರಂ ಹಾಡಿನ ವೇಳೆ ಮಾಡಿದ ಅಪಮಾನ ಮರೆಮಾಚರಲು ಈಗ ರಾಹುಲ್ ಗಾಂಧಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ಮಾಡುತ್ತಿದ್ದಾರೆ ಕಿಡಿಕಾರಿದರು.
ಬೈಟ್ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು.
