Belagavi

ರಾಷ್ಟ್ರೀಯ ಈಜು ಸ್ಪರ್ಧೆ: ಬೆಳಗಾವಿಯ ದಿಶಾ ಹೊಂಡಿಗೆ ಭರ್ಜರಿ 3 ಪದಕಗಳು!

Share

ಜೈಪುರದಲ್ಲಿ ನಡೆದ 42 ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಉದಯೋನ್ಮುಖ ಈಜುಪಟು ದಿಶಾ ಹೊಂಡಿ ಅದ್ಭುತ ಸಾಧನೆ ಮಾಡಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು ತಮ್ಮ ಅಪಾರ ಪ್ರತಿಭೆಯಿಂದ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇತ್ತೀಚೆಗೆ ಜೈಪುರದಲ್ಲಿ ಆಯೋಜಿಸಲಾಗಿದ್ದ 42 ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಪ್ರತಿಭಾವಂತ ಈಜುಪಟು ದಿಶಾ ಹೊಂಡಿ ಅತ್ಯುತ್ತಮ ಈಜಿನ ಮೂಲಕ ಗಮನಸೆಳೆದಿದ್ದಾರೆ. 4×100 ಮೀಟರ್ ಫ್ರೀಸ್ಟೈಲ್ ರಿಲೇ ವಿಭಾಗದಲ್ಲಿ ಕರ್ನಾಟಕ ರಾಜ್ಯ ತಂಡದ ಪರವಾಗಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದ ದಿಶಾ, 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ (28 ಸೆಕೆಂಡ್) ಮತ್ತು 100 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ (1:08 ಸೆಕೆಂಡ್) ತಲಾ ಒಂದೊಂದು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಭುವನೇಶ್ವರದ ‘ಇನ್‌ಸ್ಪೈರ್ ಇನ್‌ಸ್ಟಿಕೌಟ್ ಆಫ್ ಸ್ಪೋರ್ಟ್ಸ್ ಅಕಾಡೆಮಿ’ಯಲ್ಲಿ ತರಬೇತಿ ಪಡೆಯುತ್ತಿರುವ ದಿಶಾ ಅವರಿಗೆ ತಂದೆ ರಾಜೇಶ್, ತಾಯಿ ಶ್ವೇತಾ, ಹಿಂದ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಎನ್‌ಐಎಸ್ ಕೋಚ್ ವಿಶ್ವನಾಥ್ ಪವಾರ್ ಅವರ ಬೆಂಬಲವಿದೆ. ಈ ಸಾಧನೆಗೆ ಕ್ರೀಡಾಲೋಕದಿಂದ ಶ್ಲಾಘನೆ ವ್ಯಕ್ತವಾಗಿದೆ.

Tags:

error: Content is protected !!