ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರ ಜನ್ಮದಿನವನ್ನು ಖಾನಾಪುರದಲ್ಲಿ ಅಭಿಮಾನಿಗಳು ವಿಶಿಷ್ಟವಾಗಿ ಆಚರಿಸಿದ್ದಾರೆ. ಪರಿಸರ ಸಂರಕ್ಷಣೆಯ ಮಹತ್ವ ಸಾರಲು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ, ಸಾರ್ಥಕ ರೀತಿಯಲ್ಲಿ ಶುಭ ಕೋರಿದ್ದಾರೆ.


ಖಾನಾಪುರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು. ‘ಪರಿಸರ ಸಂರಕ್ಷಿಸಿ, ಗಿಡ ಮರಗಳನ್ನು ಉಳಿಸಿ’ ಎಂಬ ಸಂದೇಶದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ, ಇಸಾಕ್ ಖಾನ್ ಪಠಾಣ್, ಮುದುಕಪ್ಪ ಗೋಡದೋರ, ಅಮರ್ ದೊಡ್ಡಮನಿ, ರಮೇಶ್ ಖನಗಾವಿ, ಕಿರಣ್ ತೇಗುರ, ಪ್ರಸಾದ ಲೋಕೋಳ್ಳಿ, ಶಂಕರ ಬೋಟೇಕರ, ಪರಶುರಾಮ ಹಳಬ, ನಿಂಗಪ್ಪ ಸನದಿ, ಸುನೀಲ್ ದೊಡಮನಿ, ಕಲ್ಲಪ್ಪ ಹಳಬ, ನಾಗರಾಜ್ ಪೇಟನೇಕರ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದು ತಮ್ಮ ನೆಚ್ಚಿನ ಜನನಾಯಕಿಗೆ ಶುಭ ಹಾರೈಸಿದರು.
