Ballari

ತುಂಗಭದ್ರಾ ನೀರು ಹಂಚಿಕೆ ಗೊಂದಲ; ಕರ್ನಾಟಕ-ಆಂಧ್ರ ರೈತರ ನಡುವೆ ಹೆಚ್ಚಿದ ಅಸಮಾಧಾನ!

Share

ತುಂಗಭದ್ರಾ ಜಲಾಶಯದಿಂದ ನೀರು ಹಂಚಿಕೆ ಮಾಡುವ ವಿಚಾರದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವೆ ಮತ್ತೆ ಗೊಂದಲ ಹಾಗೂ ವಿವಾದ ಸೃಷ್ಟಿಯಾಗಿದೆ. ಜಂಟಿ ಕಾಲುವೆಗೆ ಕರ್ನಾಟಕದ ಪಾಲಿನ ನೀರನ್ನು ಮಾತ್ರ ಹರಿಸಲಾಗುತ್ತಿದ್ದು, ಆಂಧ್ರಪ್ರದೇಶದ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಜಂಟಿ ಕಾಲುವೆಯಾಗಿರುವ ಬಲದಂಡೆಯ ಕೆಳಮಟ್ಟದ ಕಾಲುವೆಯಲ್ಲಿ (LLC) ಪ್ರಸ್ತುತ ನೀರು ಹರಿಯುತ್ತಿದ್ದರೂ, ಆಂಧ್ರ ಭಾಗದ ಗಡಿ ತಲುಪುತ್ತಿಲ್ಲ ಎಂದು ಆಂಧ್ರ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವು ಎರಡೂ ರಾಜ್ಯಗಳ ರೈತರ ನಡುವೆ ಅಸಮಾಧಾನಕ್ಕೆ ಕಾರಣವಾಗಿದ್ದು, ಸದ್ಯದಲ್ಲೇ ಬೃಹತ್ ರಾಜಕೀಯ ಹಾಗೂ ರೈತ ಸಂಘರ್ಷಕ್ಕೆ ತಿರುಗುವ ಲಕ್ಷಣಗಳು ಗೋಚರಿಸುತ್ತಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಖಂಡರು ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರ ಸಮಸ್ಯೆಗಳನ್ನು ಆಲಿಸಿದರು. ಬೆಳೆಗಳ ಹಿತದೃಷ್ಟಿಯಿಂದ ಕರ್ನಾಟಕವು ತನ್ನ ಪಾಲಿನ ನೀರಿನ ಜೊತೆಗೆ ಆಂಧ್ರಪ್ರದೇಶಕ್ಕೂ ನ್ಯಾಯಯುತವಾಗಿ ಸೇರಬೇಕಾದ ನೀರಿನ ಪಾಲನ್ನು ತಕ್ಷಣವೇ ಹರಿಸಬೇಕು ಮತ್ತು ಎರಡೂ ರಾಜ್ಯಗಳ ಆಡಳಿತ ಮಂಡಳಿಗಳು ಶೀಘ್ರವೇ ಮಾತುಕತೆ ನಡೆಸಿ ಈ ನೀರು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

Tags:

error: Content is protected !!