ಬೆಳಗಾವಿಯ ಸಾಮ್ರಾಟ್ ಅಶೋಕ್ ವೃತ್ತ ರಸ್ತೆಯಲ್ಲಿ ಒಣಗಿದ ಬೃಹತ್ ಮರವೊಂದು ಧರೆಗುರುಳುವ ಹಂತದಲ್ಲಿದ್ದು, ತಕ್ಷಣವೇ ಅದನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಲಾಗುತ್ತಿದೆ.


ಬೆಳಗಾವಿಯ ಸಾಮ್ರಾಟ್ ಅಶೋಕ್ ವೃತ್ತ ರಸ್ತೆಯ ಕಸಬೇಕರ್ ಮೇಟ್ ದವಾಖಾನೆ ಆಸ್ಪತ್ರೆಗೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಮರವೊಂದು ಸಂಪೂರ್ಣವಾಗಿ ಒಣಗಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೆ, ಇದರ ಸಮೀಪದಲ್ಲೇ ಇರುವ ಪೆಟ್ರೋಲ್ ಪಂಪ್ ಹತ್ತಿರದ ಮತ್ತೊಂದು ಮರದ ಬೃಹತ್ ಕೊಂಬೆಯು ರಸ್ತೆಯತ್ತ ವಾಲಿ ಬಿದ್ದು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ. ಪ್ರತಿದಿನ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವ ಈ ಜನನಿಬಿಡ ಪ್ರದೇಶದಲ್ಲಿ ಜೀವಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಒಣಗಿದ ಮರ ಹಾಗೂ ಅಪಾಯಕಾರಿ ಕೊಂಬೆಯನ್ನು ತೆರವುಗೊಳಿಸಬೇಕೆಂದು ವಕೀಲ ಮಾರುತಿ ಕಾಮನಾಚೆ ಒತ್ತಾಯಿಸಿದ್ದಾರೆ.
