ಇಡೀ ದೇಶಕ್ಕೆ ದೇಶವೇ ಇಂದು 80ನೇ ಸ್ವಾತಂತ್ರ್ಯೋತ್ಸ ಸಂಭ್ರಮದಲ್ಲಿ ತೊಡಗಿಕೊಂಡಿದೆ. ಅದೇ ರೀತಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದಲ್ಲಿ ಸ್ವಾತಂತ್ರ್ಯ ಸಂಭ್ರಮ ಕಳೆಗಟ್ಟಿದ್ದು, ಎಲ್ಲರ ಮಧ್ಯೆ ಹಿರಿಯ ಜೀವವೊಂದು ಸ್ವಾತಂತ್ರಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ವೀರನ ಪ್ರತಿಮೆ ಬಳಿ ಬಂದು ಸ್ವಾತಂತ್ರ್ಯ ಸಂಭ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಹೌದು…ಧಾರವಾಡ ಜಿಲ್ಲೆಯ ಗಾಮನಗಟ್ಟಿ ಗ್ರಾಮದ ಮುಖ್ಯ ಬಸ್ಸ್ ನಿಲ್ದಾಣ ಬಳಿಯಲ್ಲಿ ಪ್ರತಿಯೊಬ್ಬರು 80ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದು, ಬಸ್ಸ ನಿಲ್ದಾಣ ಬಳಿಯಲ್ಲಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಸ್ವಾತಂತ್ರ್ಯೋತ್ಸ ಸಂಭ್ರಮ ಮುಗಿಲು ಮುಟ್ಟಿತ್ತು. ಇದೇ ವೇಳೆ 106ವರ್ಷದ ಅಜ್ಜಿ ಇಂಧಿರಾ ಗಾಂಧಿ ಅಭಿಮಾನಿಯಾದ ಕರಬಸಮ್ಮ ಗೌಳಿಯವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಿದರು. ಸಂಗೊಳ್ಳಿರಾಯಣ್ಣ ಬಳಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕರಬಸಮ್ಮ ಅವರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೇರಗು ತರುವುದಷ್ಟೇಯಲ್ಲ, ಈ ಮಹತ್ವದ ಸಂಭ್ರಮದಿಂದ ದೂರ ಉಳಿಯುವ ಯುವ ಪೀಳಿಗೆಗೆ ಅಜ್ಜಿ ಮಾದರಿಯಾದರು.
