
ಬೆಳಗಾವಿ ತಾಲೂಕಿನ ನೀಲಜಿ ಗ್ರಾಮದ ಶ್ರೀ ಕೃಷ್ಣ ಹಾಗೂ ಪಾಂಡುರಂಗ ಭಕ್ತಾದಿಗಳು ಪಂಢರಪುರದ ಶ್ರೀ ವಿಠ್ಠಲನ ದರ್ಶನಕ್ಕಾಗಿ ಭಾನುವಾರ ಪಂಢರಪುರಕ್ಕೆ ಪ್ರಯಾಣ ಬೆಳೆಸಿದರು. ಬಿಜೆಪಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಮಂಡಲ ಅಧ್ಯಕ್ಷ ಧನಂಜಯ ಜಾಧವ್ ಅವರು ದೇವರಿಗೆ ಪೂಜೆ ನೆರವೇರಿಸಿ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು.


ಕಳೆದ 25 ವರ್ಷಗಳಿಂದ ನೀಲಜಿ ಗ್ರಾಮದಲ್ಲಿ ಈ ಧಾರ್ಮಿಕ ಉಪಕ್ರಮವು ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಈ ವರ್ಷವೂ ಗ್ರಾಮದ ಸುಮಾರು 200 ಭಕ್ತಾದಿಗಳು 4 ಖಾಸಗಿ ವಾಹನಗಳ ಮೂಲಕ ಪಂಢರಪುರಕ್ಕೆ ತೆರಳಿದ್ದಾರೆ. ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಧನಂಜಯ ಜಾಧವ್ ಅವರು, ಗ್ರಾಮದ ಧಾರ್ಮಿಕ ಪರಂಪರೆಯನ್ನು ಕಾಯ್ದುಕೊಂಡು ಬರುತ್ತಿರುವ ಭಕ್ತರ ಶ್ರದ್ಧೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೀಲಜಿ ಗ್ರಾಮದ ಪ್ರಮುಖ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಭಕ್ತಾದಿಗಳಿಗೆ ಶುಭ ಹಾರೈಸಿದರು.

