ಶಿಕ್ಷಣ ಕ್ಷೇತ್ರ ಮಾನವ ಸಂಪನ್ಮೂಲದ ಬಹು ದೊಡ್ಡ ಆಸ್ತಿ. ಈ ಕ್ಷೇತ್ರ ಸರ್ವರ ಆರಾಧ್ಯ ದೈವ. ಶಿಕ್ಷಕರು ನಮ್ಮಸುಂದರ ಬದುಕಿನ ಶಕ್ತಿ ಎಂದು ಬೆಳಗಾವಿ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ ಹೇಳಿದರು. ಅವರು ಶನಿವಾರ ಅಂಕಲಗಿಯಲ್ಲಿ ಸಮಸ್ತ ಶಿಕ್ಷಕ ಬಳಗ ಹಾಗೂ ಆಪ್ತರಿಂದ ಜರುಗಿದ ಗುರುವಂದನಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ, ಕುಂಡದ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನಾವು ಶಕ್ತಿಯುತವಾಗಿ ಹೆಜ್ಜೆ ಇಡಲು ವಿದ್ಯಾವಂತರಾಗಿದ್ದರೆ ಮಾತ್ರ ಸಾಧ್ಯ ಎಂದರಲ್ಲದೆ, ಬೂದಿಹಾಳ ಸರ್ಕಾರಿ ಶಾಲೆಯ ಸೇವಾ ನಿವೃತ್ತಿ ಹೊಂದಿದ ಪ್ರಧಾನ ಶಿಕ್ಷಕಿ ಮಲಪ್ರಭಾ ಬೆಣ್ಣಿ ಮತ್ತು ಪತಿ ವೀರನಗೌಡಾ ಈಶ್ವರಪ್ಪಗೋಳ ದಂಪತಿಗಳ ಸಮೇತ ಸನ್ಮಾನಿಸಿ ಗೌರವಿಸಿದರು. ನಿತ್ಯ ಪರಿಸರ ಪೂಜೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪರಿಸರವನ್ನು ಪ್ರೀತಿಸಬೇಕಲ್ಲದೆ, ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ಹುಟ್ಟು ಹಬ್ಬಗಳಲ್ಲಿ ಗುರುಪೂಜೆ, ಪರಿಸರ
ಮಾಡಬೇಕು.ಈ ಕುರಿತು ಯುವ ಪೀಳಿಗೆಗೆ ಜಾಗ್ರತಿ ಮೂಡಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮದವಾಲ, ಸುಳಧಾಳ, ಅಂಕಲಗಿ ಸಿಆರ್ ಪಿ ಗಳಾದ ಬಾಗೇವಾಡಿ, ಹುಡೇದ, ಯರಗಟ್ಟಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿದ್ದ ನಿವ್ರತ್ತ ಪ್ರಾದ್ಯಾಪಕ ಸಿದ್ದಪ್ಪಾ ಹೊಳೆಯಾಚಿ ಮಾತನಾಡಿ, ಮಲಪ್ರಭಾ ಬೆಣ್ಣಿ ಶಿಕ್ಷಕಿಯಾಗಿ ಹುಟ್ಟೂರಲ್ಲಿ ಮೂವತ್ತು ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿ ಜನ್ಮ ಸಾರ್ಥಕ ಗೊಳಿಸಿಕೊಂಡವರು. ಅವರು ಎಲ್ಲರಿಗೂ ಸ್ಫೂರ್ತಿ ಎಂದರು. ಅತಿಥಿಗಳಾಗಿದ್ದ ಹುದಲಿ ಸತೀಶ ಶುಗರ್ಸ್ ಉಪಾಧ್ಯಕ್ಷ ಎಲ್ ಆರ್ ಕಾರಗಿ, ಅಶೋಕ ಬೆಣ್ಣಿ, ಮಂಜುನಾಥ ನಲ್ಪರೋಶಿ, ಜಿ ಆರ್ ಸನದಿ, ಎಸ್ ಬಿ ಉರಬಿನಹಟ್ಟಿ ಶಂಕರ ಬೆಣ್ಣಿ ಆಸೀನರಾಗಿದ್ದರು. ಬೂದಿಹಾಳ ಸರ್ಕಾರಿ ಶಾಲೆಯ
ನಿವ್ರತ್ತ ಪ್ರಧಾನ ಶಿಕ್ಷಕಿ ಮಲಪ್ರಭಾ ಬೆಣ್ಣಿ ಸನ್ಮಾನಿಸಿದ್ದಕ್ಕೆ ಮತ್ತು ಸೇವಾವಧಿಯಲ್ಲಿ ಸಹಕರಿಸಿದ್ದಕ್ಕೆ ಸರ್ವರಿಗೂ ಧನ್ಯವಾದ ಹೇಳಿದರಲ್ಲದೆ, ಸುಧೀರ್ಘ ಮೂರು ದಶಕಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸುದೈವ ಎಂದರು.

ಕುಂದರನಾಡಿನ ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು, ಶಿಕ್ಷಕರು, ಬಂದು,ಮಿತ್ರರು, ಅಭಿಮಾನಿಗಳು ಮಲಪ್ರಭಾ ಬೆಣ್ಣಿ ಮತ್ತು ಅವರ ಪತಿ ವೀರನಗೌಡಾ ಈಶ್ವರಪ್ಪಗೋಳ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಅಕ್ಕತಂಗೇರಹಾಳ, ಬೂದಿಹಾಳ, ಅಂಕಲಗಿ, ಮದವಾಲ ಸೇರಿದಂತೆ ಎಲ್ಲ ಶಾಲೆಗಳ ಶಿಕ್ಷಕರು, ಸಿಬ್ಬಂದಿ, ನಾಡಿನ ವಿವಿಧ ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಉಪಸ್ತಿತರಿದ್ದರು. ಗಣೇಶ ಮರಲಿಂಗನ್ನವರ,
ಪ್ರಣತಿ ಈಶ್ವರಪ್ಪಗೋಳ ನಿರೂಪಿಸಿದರು. ಪ್ರಕಾಶ ಮರಲಿಂಗನ್ನವರ ಸ್ವಾಗತಿಸಿದರು.
ಬಸನಗೌಡಾ ಈಶ್ವರಪ್ಪಗೋಳ ಪ್ರಸ್ತಾವಿಕ ಮಾತನಾಡಿದರು.
ಶಿವಾನಂದ ಹಣಮನ್ನವರ ವಂದಿಸಿದರು.
ವರದಿ, ಸುರೇಶ ಉರಬಿನಹಟ್ಟಿ
