kagawad

ಉಗಾರ ಖುರ್ದ ಶೈಕ್ಷಣಿಕ ಧುರೀಣೆ, ಪ್ರಿನ್ಸಿಪಾಲ್ ಪ್ರಭಾವತಿ ಕಾರ್ಚಿ ಇನ್ನಿಲ್ಲ

Share

ಉಗಾರ ಖುರ್ದ ಪಟ್ಟಣದ ಶ್ರೀ ಮಹಾಲಕ್ಷ್ಮಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ಶಿವಪ್ಪ ಕಾರ್ಚಿ (೮೭) ಇವರು ಶನಿವಾರದಂದು ನಿಧನರಾದರು.
ಇವರು ಹಲವಾರು ವರ್ಷ ಕಲಬುರಗಿ (ಗುಲ್ಬರ್ಗ) ನಗರದ ಶರಣಬಸವೇಶ್ವರ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆಯು ಐನಾಪುರ ಪಟ್ಟಣದ ರುದ್ರಭೂಮಿಯಲ್ಲಿ ಜರುಗಿತು. ಇವರು ಅವಿವಾಹಿತರಾಗಿದ್ದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶ್ರೀಮತಿ ಶೈಲಜಾ ಕಾರ್ಚಿ ಇವರ ಅತ್ತೆಯಾಗಿದ್ದರು.

Tags:

error: Content is protected !!