ಬೆಳಗಾವಿಯ ಸರ್ವ ಲೋಕ್ ಸೇವಾ ಫೌಂಡೇಶನ್ ವತಿಯಿಂದ ಚಂದಗಡ ತಾಲೂಕಿನ ಕಿಟವಾಡ ಗ್ರಾಮದ ಮಹಾಲಕ್ಷ್ಮಿ ಮಂದಿರದ ಆವರಣದಲ್ಲಿ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಫೌಂಡೇಶನ್ ಸಂಸ್ಥಾಪಕ ವೀರೇಶ್ ಬಸಯ್ಯ ಹಿರೇಮಠ್ ಅವರ ನೇತೃತ್ವದಲ್ಲಿ ನಡೆದ ಈ ಸೇವಾ ಕಾರ್ಯಕ್ರಮದಲ್ಲಿ ಹಲವು ವಿವಿಧ ತಳಿಯ ಪವಿತ್ರ ಹಾಗೂ ಔಷಧೀಯ ಸಸಿಗಳನ್ನು ನೆಡಲಾಯಿತು.


ಕೋಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಕಿಟವಾಡ ಗ್ರಾಮದ ಮಹಾಲಕ್ಷ್ಮಿ ಮಂದಿರದ ಪರಿಸರದಲ್ಲಿ ಸರ್ವ ಲೋಕ್ ಸೇವಾ ಫೌಂಡೇಶನ್ ಬೆಳಗಾವಿ ಸಂಸ್ಥೆಯ ವೀರೇಶ್ ಬಸಯ್ಯ ಹಿರೇಮಠ್ ಅವರ ನೇತೃತ್ವದಲ್ಲಿ ಬಿಲ್ವಪತ್ರೆ, ರುದ್ರಾಕ್ಷಿ, ಅರಳಿ, ಆಲ, ಬೇವು, ಲಿಂಬೆ ಹಾಗೂ ಶಮಿ ಸಸಿಗಳನ್ನು ನೆಡಲಾಯಿತು. ಇದೇ ವೇಳೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ನೆರೆದಿದ್ದವರಿಗೆ ಮಹತ್ವದ ಮಾಹಿತಿ ನೀಡಿದ ವೀರೇಶ್ ಹಿರೇಮಠ್, ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಿ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು. ಈ ಪರಿಸರ ಸೇವಾ ಕಾರ್ಯಕ್ರಮದಲ್ಲಿ ವಸಂತ್ ಕಾಂಬಳೆ, ಮಾರುತಿ ಕಾಂಬಳೆ, ಕೃಷ್ಣ ವಾರ್ಪೆ, ಹೌಶಪ್ಪ ಕಸಲಕರ್, ಭಗವಾನ್ ಹೆಬ್ಬಾಳಕರ್, ಬಾಳು ಪಾಟೀಲ್, ವಿಜಯ್ ಕಸಲ್ಕರ್, ಕೇದಾರಿ ತೇವರವಾಡಕರ್, ಭರ್ಮ ಪಾಟೀಲ್, ಅಶೋಕ್ ಪಾಟೀಲ್, ದಶರಥ ರಾವಜಿಚೆ ಹಾಗೂ ಕಮಲಾಬಾಯಿ ಕಸಲಕರ್ ಸೇರಿದಂತೆ ಹಲವು ಪ್ರಮುಖರು ಸಕ್ರಿಯವಾಗಿ ಭಾಗವಹಿಸಿದ್ದರು.

