Belagavi

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್‌ನಿಂದ ಅವೈಜ್ಞಾನಿಕ ನಿರ್ಧಾರ

Share

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್‌ನ ವಿವಾದಾತ್ಮಕ ನಿರ್ಧಾರಗಳ ವಿರುದ್ಧ ಇದೀಗ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ಪರವಾಗಿ ಮಾಜಿ ಶಾಸಕ ಅನಿಲ್ ಬೆಣಕೆ ನೇತೃತ್ವದಲ್ಲಿ ಸಂಸದ ಜಗದೀಶ ಶೆಟ್ಟರ್ ಅವರಿಗೆ ಈ ಬಗ್ಗೆ ತುರ್ತು ಮನವಿ ಸಲ್ಲಿಸಲಾಗಿದೆ.

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇತ್ತೀಚೆಗೆ ಕಂಟೋನ್ಮೆಂಟ್ ಮೂಲಕ ಹಾದುಹೋಗುವ ಮೂರು ಪ್ರಮುಖ ರಸ್ತೆಗಳನ್ನು ಮುಚ್ಚಲು ಹಾಗೂ ಇತರ ಎರಡು ರಸ್ತೆಗಳಲ್ಲಿ ಅಪಾಯಕಾರಿ ಎತ್ತರದ ತಡೆಗೋಡೆಗಳನ್ನು (Height barriers) ಅಳವಡಿಸಲು ನಿರ್ಧರಿಸಿದ್ದು, ಇದು ಸಾರ್ವಜನಿಕರ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಈ ರಸ್ತೆಗಳ ನಿರ್ಬಂಧದಿಂದಾಗಿ ಪ್ರತಿದಿನ ಸಂಚರಿಸುವ ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ಹಾಗೂ ರಿಕ್ಷಾ ಚಾಲಕರು ಹಲವು ಕಿಲೋಮೀಟರ್ ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದರಿಂದ ಸಮಯ ಮತ್ತು ಹಣದ ಭಾರೀ ವ್ಯಯವಾಗಲಿದೆ. ಅಲ್ಲದೆ, ಅಪಾಯಕಾರಿ ತಡೆಗೋಡೆಗಳಿಂದ ಪ್ರಾಣಾಪಾಯದ ಭೀತಿಯೂ ಎದುರಾಗಿದೆ. ವಿಐಪಿ ಹಾಗೂ ತುರ್ತು ಸಂದರ್ಭಗಳಲ್ಲಿ ಪರ್ಯಾಯ ಮಾರ್ಗವಾಗಿ ಬಳಸಲ್ಪಡುತ್ತಿದ್ದ ಈ ರಸ್ತೆಗಳ ಮೇಲಿನ ನಿರ್ಬಂಧವು 1961ರ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳ ಕಾಯ್ದೆಗೂ ವಿರುದ್ಧವಾಗಿದ್ದು, ಬೆಳಗಾವಿ ಕೋಟೆಯ ಪರಂಪರೆಗೆ ಧಕ್ಕೆ ತರಲಿದೆ. ಈ ಎಲ್ಲಾ ಜನವಿರೋಧಿ ಹಾಗೂ ಅವೈಜ್ಞಾನಿಕ ಕ್ರಮಗಳನ್ನು ಕೈಬಿಡುವಂತೆ ಒತ್ತಾಯಿಸಿ, ಕಂಟೋನ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಮಾಜಿ ಶಾಸಕ ಅನಿಲ್ ಬೆಣಕೆ ಅವರು ಸಂಸದ ಜಗದೀಶ ಶೆಟ್ಟರ್ ಅವರಿಗೆ ಪತ್ರ ಮುಖೇನ ತುರ್ತು ಮನವಿ ಸಲ್ಲಿಸಿ, ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Tags:

error: Content is protected !!