ಖಾನಾಪುರ ತಾಲೂಕಿನ ಲೋಕೋಳ್ಳಿ ಹಾಗೂ ಜೈನಕೊಪ್ಪ ಗ್ರಾಮಸ್ಥರು ಮತ್ತು ವಾರಕರಿಗಳ ವತಿಯಿಂದ ಶ್ರೀ ಕ್ಷೇತ್ರ ಪಂಡರಪುರದಲ್ಲಿ ನಿರ್ಮಿಸಲಾಗುತ್ತಿರುವ ಭಕ್ತ ನಿವಾಸ ಕಟ್ಟಡದ ಸ್ಲ್ಯಾಬ್ ಕಾಮಗಾರಿ ಯಶಸ್ವಿಯಾಗಿ ನೆರವೇರಿದೆ. ಈ ಶುಭ ಕಾರ್ಯಕ್ಕೆ ಯುವ ಬಿಜೆಪಿ ಮುಖಂಡ ರಾಜವರ್ಧನ್ ಅರವಿಂದ್ ಪಾಟೀಲ್ ಅವರು ಚಾಲನೆ ನೀಡಿದರು.



ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ ಖಾನಾಪುರ ತಾಲೂಕಿನ ಲೋಕೋಳ್ಳಿ ಮತ್ತು ಜೈನಕೊಪ್ಪ ಗ್ರಾಮದ ವಾರಕರಿಗಳು ಹಾಗೂ ಗ್ರಾಮಸ್ಥರು ಶ್ರೀ ಕ್ಷೇತ್ರ ಪಂಡರಪುರದಲ್ಲಿ ಭಕ್ತರ ತಂಗುವಿಕೆಗಾಗಿ ನೂತನ ನಿವಾಸ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದ ಸ್ಲ್ಯಾಬ್ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಯುವ ಬಿಜೆಪಿ ಮುಖಂಡ ರಾಜವರ್ಧನ್ ಅರವಿಂದ್ ಪಾಟೀಲ್, “ಖಾನಾಪುರ ತಾಲೂಕಿನ ಲೋಕೋಳ್ಳಿ ಹಾಗೂ ಜೈನಕೊಪ್ಪ ವಾರಕರಿಗಳು ಮತ್ತು ಗ್ರಾಮಸ್ಥರೆಲ್ಲರೂ ಒಗ್ಗೂಡಿ ಪಂಡರಪುರದ ಪಾಂಡುರಂಗನ ದರ್ಶನಕ್ಕೆ ಬರುವ ಭಕ್ತರಿಗಾಗಿ ಮಾಡುತ್ತಿರುವ ಈ ಸೇವೆಯು ನಮ್ಮಂತಹ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

