Vijaypura

ಕೋಲ್ಕತ್ತಾ ಆರ್‌ಜಿ ಕರ್ ಆಸ್ಪತ್ರೆ ದುರಂತಕ್ಕೆ ಎರಡು ವರ್ಷ: ‘ಅಭಯ ದಿನ’ ಆಚರಣೆ

Share

ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ವೈದ್ಯರು ಹಾಗೂ ಮಹಿಳಾ ಆರೋಗ್ಯ ಕಾರ್ಯಕರ್ತರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಆಗಸ್ಟ್ 8ರಂದು ‘ಅಭಯ ದಿನ’ ಆಚರಿಸಲಾಗುತ್ತಿದೆ.

ನೋ ಟು ವೈಲೆನ್ಸ್ ಎಗೇನ್ಸ್ಟ್ ವುಮೆನ್ ಕಮಿಟಿ, ವೈಲೆನ್ಸ್ ಎಗೇನ್ಸ್ಟ್ ಡಾಕ್ಟರ್ಸ್ ಕಮಿಟಿ ಹಾಗೂ ಪಬ್ಲಿಕ್ ಅವೇರ್‌ನೆಸ್ ಕಮಿಟಿ ವತಿಯಿಂದ “ವೈದ್ಯರ ಮೇಲಿನ ಹಿಂಸಾಚಾರ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತರ ಸುರಕ್ಷತೆ” ಎಂಬ ವಿಷಯದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಭಾಗವಹಿಸಿ ಸುರಕ್ಷತೆ, ಗೌರವ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವಂತೆ ಸಂಘಟಕರು ಕರೆ ನೀಡಿದ್ದಾರೆ.

ಆರ್‌ಜಿ ಕರ್ ಆಸ್ಪತ್ರೆ ದುರಂತವನ್ನು ಸ್ಮರಿಸುವುದರ ಜೊತೆಗೆ, ವೈದ್ಯರು ಹಾಗೂ ಮಹಿಳಾ ಆರೋಗ್ಯ ಕಾರ್ಯಕರ್ತರು ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸುರಕ್ಷಿತ ಹಾಗೂ ಗೌರವಯುತ ವಾತಾವರಣ ಕಲ್ಪಿಸುವ ಅಗತ್ಯವನ್ನು ಅಭಿಯಾನದಲ್ಲಿ ಒತ್ತಿಹೇಳಲಾಗುತ್ತಿದೆ.
“ನಿಮ್ಮ ಧ್ವನಿ ಎತ್ತಿ, ಅನ್ಯಾಯದ ವಿರುದ್ಧ ನಿಲ್ಲಿ” ಎಂಬ ಸಂದೇಶದೊಂದಿಗೆ ವೈದ್ಯರು ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಹಾಗೂ ಘನತೆಗಾಗಿ ಸಾರ್ವಜನಿಕರು ಬೆಂಬಲ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Tags:

error: Content is protected !!