Belagavi

ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ೨೪ ಗಂಟೆ ನೀರು ಸರಬರಾಜು ಹಾಗೂ ಬಿಲ್ಲಿಂಗ್ ಕುರಿತು ಜಾಗೃತಿ ಸಭೆ

Share

ಬೆಳಗಾವಿಯ ವಾರ್ಡ್ ಸಂಖ್ಯೆ ೩೩ರ ಮಾರ್ಕಂಡೇಯ ನಗರದಲ್ಲಿ ಸಾರ್ವಜನಿಕರಿಗೆ ೨೪ ಗಂಟೆ ಕುಡಿಯುವ ನೀರಿನ ಸಂಪರ್ಕ ಹಾಗೂ ಬಿಲ್ಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಲು ವಿಶೇಷ ಸಭೆ ಆಯೋಜಿಸಲಾಗಿತ್ತು. ಮಾಜಿ ಉಪಮೇಯರ್ ಹಾಗೂ ಹಾಲಿ ನಗರಸೇವಕಿ ರೇಷ್ಮಾ ಪ್ರವೀಣ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಎಲ್ ಆಂಡ್ ಟಿ ಸಂಸ್ಥೆಯ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.


ಸಭೆಯಲ್ಲಿ ಎಲ್ ಆಂಡ್ ಟಿ ಅಧಿಕಾರಿ ಚಾಲುಶೀಲಾ ಅವರು ಕುಡಿಯುವ ನೀರಿನ ನೂತನ ಸಂಪರ್ಕ ಪಡೆದುಕೊಳ್ಳುವುದು ಮತ್ತು ಮಾಸಿಕ ಬಿಲ್ಲಿಂಗ್ ವ್ಯವಸ್ಥೆಯ ಬಗ್ಗೆ ನಾಗರಿಕರಿಗೆ ವಿವರವಾದ ಮಾಹಿತಿ ನೀಡಿದರು. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಪಾಟೀಲ್ ಮಾತನಾಡಿ, ನೀರಿನ ಮಹತ್ವವನ್ನು ವಿವರಿಸಿದ್ದಲ್ಲದೆ, ರೇಷ್ಮಾ ಪಾಟೀಲ್ ಅವರ ವಾರ್ಡ್ ವ್ಯಾಪ್ತಿಯಲ್ಲಿ ಈಗಾಗಲೇ ಶೇಕಡಾ ೯೦ರಷ್ಟು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಇರುವ ಕೆಲಸಗಳನ್ನು ಶೀಘ್ರದಲ್ಲೇ ಮುಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಭೆಯಲ್ಲಿ ಪ್ರಮುಖರಾದ ಸಂತೋಷ್ ಬೋರ್ಕರ್, ಜಾಧವ್ ಸಾಹೇಬ್, ಜ್ಯೋತಿ ಮುತಗೇಕರ್, ಸುಜಾತಾ ಪಾಟೀಲ್, ಮೇಘಾ ಸಾಳುಂಕೆ, ಭೀಮಪ್ಪ ಪಾಟೀಲ್ ಸೇರಿದಂತೆ ವಾರ್ಡ್‌ನ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

Tags:

error: Content is protected !!