ಬೆಳಗಾವಿಯ ಬೆಳಗಾವಿ ಕೆಎಲ್ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಡುಕೇಶನ್ ಆಂಡ್ ರಿಸರ್ಚ್ (ಐಎಂಇಆರ್) ಸಂಸ್ಥೆಯು ಹಿರಿಯ ನಾಗರಿಕರು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ್ದ ೧೫ ದಿನಗಳ ‘ಡಿಜಿಟಲ್ ಸಬಲೀಕರಣ’ ಪ್ರಮಾಣಪತ್ರ ಕೋರ್ಸ್ನ ಮೊದಲ ಬ್ಯಾಚ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ದೈನಂದಿನ ಜೀವನದಲ್ಲಿ ಆಧುನಿಕ ತಂತ್ರಜ್ಞಾನವನ್ನು ಆತ್ಮವಿಶ್ವಾಸದಿಂದ ಬಳಸಲು ಸಹಾಯ ಮಾಡುವ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿತ್ತು.ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಆನ್ಲೈನ್ ಭದ್ರತೆ, ಡಿಜಿಟಲ್ ಹಣಪಾವತಿ (UPI), ಸೋಶಿಯಲ್ ಮೀಡಿಯಾ ಬಳಕೆ, ಸರ್ಕಾರಿ ಸೇವೆಗಳನ್ನು ಆನ್ಲೈನ್ನಲ್ಲಿ ಪಡೆಯುವುದು ಮತ್ತು ಎಐ (AI) ತಂತ್ರಜ್ಞಾನದ ಬಳಕೆಯ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. ಸಂಸ್ಥೆಯ ನಿರ್ದೇಶಕರಾದ ಡಾ. ಆರಿಫ್ ಶೇಖ್ ಅವರ ಮಾರ್ಗದರ್ಶನದಲ್ಲಿ ಸಂಪನ್ಮೂಲ ವ್ಯಕ್ತಿ ಸೌ. ಅನುಪ್ರಿಯಾ ಕಣಬರಕರ್ ಅವರು ತರಬೇತಿಯನ್ನು ನಡೆಸಿಕೊಟ್ಟರು. ಈ ಕೋರ್ಸ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಸ್ಥೆಯು ಶೀಘ್ರದಲ್ಲೇ ಮುಂದಿನ ಬ್ಯಾಚ್ ಪ್ರಾರಂಭಿಸಲು ಯೋಜಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 0831-2405511 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
