ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೋನಿನಲ್ಲಿ ಬಂಧಿ ಮಾಡುವ ಮೂಲಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಕತಿ ಅರಣ್ಯ ವಲಯಕ್ಕೆ ಹೊಂದಿಕೊAಡಿರುವ ಸುತಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೆ ಕೆಲವು ಗ್ರಾಮಸ್ಥರಿಗೆ ಹಾಗೂ ಕೆಲವು ವಾಹನ ಸವಾರರಿಗೆ ಇಲ್ಲಿ ಚಿರತೆ ಇರುವದು ಕಂಡು ಬಂದಿತು.
ಬಳಿಕ ಕೆಲವು ವಾಹನ ಸವಾರರು ಸಾರ್ವಜನಿಕರಲ್ಲಿ ಇದರ ಬಗ್ಗೆ ತಿಳವಳಿಕೆ ಮೂಡಿಸುವ ನಿಟ್ಟನಲ್ಲಿ ಚಿರತೆ ಕಾಣಿಕೊಂಡಿದ್ದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಆ ವಿಡಿಯೋವನ್ನು ಸಾಮಾಜಿಕ ಅಂತರ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅಲ್ಲದೆ ಈ ಕುರಿತು ಸುತಗಟ್ಟಿಯ ಕೆಲವು ಗ್ರಾಮಸ್ಥರು ಕಾಕತಿ ಅರಣ್ಯ ಇಲಾಖೆಯವರಿಗೆ ಈ ಸುದ್ದಿ ಮುಟ್ಟಿಸಿದ್ದರು.ಈ ಸುದ್ದಿಯಿಂದ ಎಚ್ಚರಿಕೆ ವಹಿಸಿದ್ದ ಅರಣ್ಯ ಇಲಾಖೆಯು ಸುತಗಟ್ಟಿ ಗ್ರಾಮದ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿದ್ದರು. ಅಲ್ಲದೆ ಚಿರತೆ ಚಲನವಲನ ಬಗ್ಗೆ ಮಾಹಿತಿ ಸಂಗ್ರಸಿದ್ದರು. ಬಳಿಕ ಸುತಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯವ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಸೆರೆ ಹಿಡಿಯುವ ಬೋನ್ (ಕೇಜ್) ಅಳವಡಿಕೆ ಮಾಡಿದ್ದರು.
ಬಳಿಕ ಚಿರತೆಯು ಬುಧವಾರ ಬೆಳಿಗ್ಗೆ ಬೋನಿಗೆ ಬಿದ್ದಿದೆ. ಬಳಿಕ ಈ ಚಿರತೆ ಬಿದ್ದ ಬೋನನನ್ನು ಕಾಕತಿಯ (ರೆಷ್ಯ+ ಸೆಂಟರ್) ರಕ್ಷಣಾ ಕೇಂದ್ರಕ್ಕೆ ವಾಹನ ಒಂದರಲ್ಲಿ ತರಲಾಗಿದೆ. ಬಳಿಕ ಈ ಚಿರತೆಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಚಿರತೆ ಸೆರೆ ಹಿಡಿಯವಲ್ಲಿ ಕಾಕತಿ ಆರ್ಎಫ್ಓ ಬಿ.ಎಲ್.ಸನದಿ, ಹುಕ್ಕೇರಿ ಆರ್ಎಫ್ಓ ಶಿವುಕುಮಾರ ಮಾಳಿ, ಡಿಆರ್ಎಫ್ಓಗಳಾದ ಬಸವರಾಜ ಹನಗಂಡಿ, ಪ್ರಭು ತಂಗಡಿ, ರಾಕೇಶ ಮುರಾರಿ, ಮುತಗೇಕರ ಹಾಗೂ ಕಾಕತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಶ್ರಮವಹಿದರು. ಅಲ್ಲದೆ ಸುತಗಟ್ಟಿ ಗ್ರಾಮಸ್ಥರು ಚಿರತೆ ಸ್ಥಳಾತಂರಿಸಲು ಸಹಕಾರ ನೀಡಿದರು.
