Belagavi

ಬೆಳಗಾವಿಯಲ್ಲಿ ‘ಜೀವನವಿದ್ಯಾ ಮಿಷನ್’ ವತಿಯಿಂದ ಆಗಸ್ಟ್ 9 ರಂದು ‘ಗುರುಪೂರ್ಣಿಮಾ ಹಾಗೂ ಕೃತಜ್ಞತಾ ದಿನ’ ಆಚರಣೆ: ಶಂಕರರಾವ್ ಬಾಂದಕರ

Share

ಬೆಳಗಾವಿಯಲ್ಲಿ ‘ಜೀವನವಿದ್ಯಾ ಮಿಷನ್’ ವತಿಯಿಂದ ಆಗಸ್ಟ್ 9ರಂದು ‘ಗುರುಪೂರ್ಣಿಮಾ ಮಹೋತ್ಸವ ಹಾಗೂ ಕೃತಜ್ಞತಾ ದಿನ’ವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಈ ಕುರಿತು ಪ್ರಬೋಧಕರಾದ ಶಂಕರರಾವ್ ಬಾಂದಕರ ಅವರು ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿಯ ರೈಲ್ವೇ ಓವರ್ ಬ್ರಿಡ್ಜ್ ಬಳಿಯಿರುವ ಮರಾಠಾ ಮಂದಿರ ಹಾಲ್‌ನಲ್ಲಿ ಆಗಸ್ಟ್ 9, ರವಿವಾರದಂದು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:30 ರವರೆಗೆ ‘ಗುರುಪೂರ್ಣಿಮಾ ಮಹೋತ್ಸವ ಹಾಗೂ ಕೃತಜ್ಞತಾ ದಿನ’ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮುಖ್ಯ ಪ್ರಬೋಧಕರಾಗಿ ಸದ್ಗುರು ಶ್ರೀ ವಾಮನರಾವ್ ಪೈ ಅವರ ಸುಪುತ್ರ ಹಾಗೂ ಯುವ ಮಾರ್ಗದರ್ಶಕರಾದ ಶ್ರೀ ಪ್ರಲ್ಹಾದ್ ವಾಮನರಾವ್ ಪೈ ಅವರು ಭಾಗವಹಿಸಲಿದ್ದಾರೆ. ಬೆಳಗಾವಿಯಲ್ಲಿ ಕಳೆದ 40 ವರ್ಷಗಳಿಂದ ಜೀವನವಿದ್ಯಾ ಮಿಷನ್ ಸಾಮಾಜಿಕ, ಶೈಕ್ಷಣಿಕ ಹಾಗೂ ಸಂಸ್ಕಾರ ಅಭಿಯಾನಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಸದ್ಗುರುಗಳ ಪ್ರತಿ ಕೃತಜ್ಞತೆ ಸಲ್ಲಿಸಲು ಈ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಶಂಕರರಾವ್ ಬಾಂದಕರ ತಿಳಿಸಿದರು.

ಇದರೊಂದಿಗೆ, ಆಗಸ್ಟ್ 10 ರ ಸೋಮವಾರದಂದು ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್ ಕಾಲೇಜಿನ ಛತ್ರಪತಿ ಶಿವಾಜಿ ಮಹಾರಾಜ್ ಸ್ಟೇಡಿಯಂನಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವಜನರಿಗಾಗಿ ವಿಶೇಷ ಪ್ರೇರಣಾದಾಯಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸದ್ಗುರುಗಳು ನೀಡಿದ ‘ಜಗತ್ತು ಸುಖಿಯಾಗಿರಲಿ’ ಹಾಗೂ ‘ಮಾನವ ಸುಖಿಯಾಗಲಿ’ ಎಂಬ ತತ್ವಜ್ಞಾನದಡಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು, ಬೆಳಗಾವಿಯ ಎಲ್ಲಾ ಸಾರ್ವಜನಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಲಾಭ ಪಡೆಯಬೇಕಾಗಿ ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶೈಲೇಶ್ ಶಿರೋಡಕರ್, ಕಾರ್ಯದರ್ಶಿ ಸತೀಶ್ ಬೇಕವಾಡಕರ್ ಹಾಗೂ ಖಜಾಂಚಿ ದೀಪಕ್ ಬಿರ್ಜೆ ಉಪಸ್ಥಿತರಿದ್ದರು.

Tags:

error: Content is protected !!