ಸಂಘಟನ್ ಸೃಜನ್ ಅಭಿಯಾನ’ದ ನಿಮಿತ್ಯ ಎಐಸಿಸಿ ಕಾರ್ಯದರ್ಶಿ ಹಾಗೂ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಲ್ಲಿ ಉತ್ತರ ಕನ್ನಡದ ಹಿರಿಯ ನಾಯಕರಾದ ಆರ್. ವಿ. ದೇಶಪಾಂಡೆ ಮತ್ತು ಮಾರ್ಗರೇಟ್ ಆಳ್ವ ಅವರನ್ನು ಭೇಟಿ ಮಾಡಿ ಚರ್ಚಿಸಿದರು.


ಪಕ್ಷದ ಸಂಘಟನೆಯನ್ನು ಕೆಳಹಂತದಿಂದ ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಸಂಘಟನ್ ಸೃಜನ್ ಅಭಿಯಾನ’ದ ಜವಾಬ್ದಾರಿಯನ್ನು ಅತ್ಯಂತ ಉತ್ಸಾಹದಿಂದ ನಿಭಾಯಿಸುತ್ತಿರುವುದಾಗಿ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಹಾಗೂ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಅವರು, ಹಿರಿಯರ ಅನುಭವದ ಮಾತುಗಳು ಹೊಸ ವಿಷಯಗಳನ್ನು ಕಲಿಯಲು ಮತ್ತು ಸಂಘಟನಾ ಕಾರ್ಯದಲ್ಲಿ ಮುನ್ನಡೆಯಲು ನೆರವಾಗಲಿವೆ ಎಂದರು. ಹಿರಿಯ ನಾಯಕರ ಮಾರ್ಗದರ್ಶನದಲ್ಲೇ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವುದಾಗಿ ಪ್ರಕಟಿಸಿದ ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕರಾದ ರೋಸೆಲಿನಾ, ಪಿಸಿಸಿ ವೀಕ್ಷಕರಾದ ಡಾ. ರಾಘವೇಂದ್ರ ಹಾಗೂ ನವೀನ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

