Belagavi

ಟಿಳಕವಾಡಿಯ ಡಿವೈನ್ ಪ್ರಾವಿಡೆನ್ಸ್ ಶಾಲೆಯಲ್ಲಿ ‘ಇನ್ಸೆಂಡೋ 2026’ ಸಂಭ್ರಮ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ!

Share

ಬೆಳಗಾವಿಯ ಟಿಳಕವಾಡಿಯ ಡಿವೈನ್ ಪ್ರಾವಿಡೆನ್ಸ್ ಕಾನ್ವೆಂಟ್ ಹೈಸ್ಕೂಲ್ ಆವರಣದಲ್ಲಿ ‘ಇನ್ಸೆಂಡೋ 2026’ ಬೃಹತ್ ಅಂತರ ಶಾಲಾ ಸ್ಪರ್ಧೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು. ನಗರದ ಪ್ರಮುಖ ಶಾಲೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ಗಮನ ಸೆಳೆದರು.

ಬೆಳಗಾವಿಯ ಟಿಳಕವಾಡಿಯ ಡಿವೈನ್ ಪ್ರಾವಿಡೆನ್ಸ್ ಕಾನ್ವೆಂಟ್ ಹೈಸ್ಕೂಲಿನಲ್ಲಿಂದು ‘ಇನ್ಸೆಂಡೋ 2026’ ಎಂಬ ಬೃಹತ್ ಅಂತರ ಶಾಲಾ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಸುಮಾರು 20 ಶಾಲೆಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಚರ್ಚಾ ಸ್ಪರ್ಧೆ, ನೃತ್ಯ ಮತ್ತು ನಾಟಕ, ಕಲೆ, ಮಾಸ್ಟರ್ ಅಂಡ್ ಮಿಸ್, ಶಾರ್ಕ್ ಟ್ಯಾಂಕ್, ಸರ್ಪ್ರೈಸ್ ಈವೆಂಟ್ ಹಾಗೂ ಫ್ಯಾಷನ್ ಶೋ ಸೇರಿದಂತೆ ಒಟ್ಟು 7 ವಿಭಿನ್ನ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಹಾಗೂ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿಯವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡಕಾರ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಡಿವೈನ್ ಪ್ರೊವಿಡೆನ್ಸ್ ಶಾಲೆಯ PTA ಸದಸ್ಯರು ತಮ್ಮ ಶಾಲೆಯಲ್ಲಿ ಆಯೋಜಿಸಲಾದ ‘ಇನ್ಸೆಂಡೊ’ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಅವರು, “ಇನ್ಸೆಂಡೊ ಪ್ರತಿ ವರ್ಷ ನಡೆಯುವ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಾಗಿದ್ದು, ಈ ಬಾರಿ ಸುಮಾರು 22 ಶಾಲೆಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವಿವಿಧ ಕ್ರೀಡೆ ಮತ್ತು ಕಲಾ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರ ಭವಿಷ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆಎಂದು ತಿಳಿಸಿದರು.

ಡಿವೈನ್ ಪ್ರೊವಿಡೆನ್ಸ್ ಶಾಲೆಯ PTA ಸದಸ್ಯರಾದ ವಿನಾಯಕ್ ಎಲ್. ಜಿ. ಅವರು ಮಾತನಾಡಿ, “ಇನ್ಸೆಂಡೊ ನಮ್ಮ ಶಾಲೆಯ ವಾರ್ಷಿಕ ಪ್ರಮುಖ ಕಾರ್ಯಕ್ರಮವಾಗಿದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ, ಸೃಜನಶೀಲತೆ, ಹೊಸ ಅನ್ವೇಷಣೆಗಳು ಮತ್ತು ಸರ್ವಾಂಗೀಣ ವ್ಯಕ್ತಿತ್ವ ವಿಕಸನವನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ತಂದು, ಕಲಿಕೆ ಹಾಗೂ ಸಂಸ್ಕೃತಿಯನ್ನು ಸಂಭ್ರಮಿಸಲು ನೆರವಾಗುತ್ತದೆ” ಎಂದು ತಿಳಿಸಿದರು.

Tags:

error: Content is protected !!