bagalkot

ಬಾಗಲಕೋಟೆಯಲ್ಲಿ ಮಳೆಯ ಸಿಂಚನ: ಬಿಸಿಲಿನಿಂದ ಬೆಂದಿದ್ದ ಜನರಿಗೆ ರಿಲೀಫ್, ರೈತರಲ್ಲಿ ಸಂತಸ

Share

ಕಳೆದ ಕೆಲವು ದಿನಗಳಿಂದ ಭಾರಿ ಬಿಸಿಲಿನಿಂದ ತಂಗೆಟ್ಟಿದ್ದ ಬಾಗಲಕೋಟೆ ಹಾಗೂ ಇಳಕಲ್ ನಗರದಲ್ಲಿ ಇಂದು ದಿಢೀರ್ ಮಳೆಯಾಗಿದ್ದು, ವಾತಾವರಣ ಸಂಪೂರ್ಣ ಬದಲಾಗಿದೆ. ಇಳಕಲ್‌ನಲ್ಲಿ ಸುರಿದ ಜಿಟಿಜಿಟಿ ಮಳೆಯಿಂದಾಗಿ ನಗರ ಪ್ರದೇಶಗಳು ಮಲೆನಾಡಿನಂತಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದ್ದರಿಂದ ರೈತರ ಮೊಗದಲ್ಲಿ ಸಂತಸ ಅರಳಿದೆ.

ಬಾಗಲಕೋಟೆ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಮತ್ತು ಸೆಖೆಯಿಂದ ಕಂಗಾಲಾಗಿದ್ದ ಜನರಿಗೆ ಇಂದು ಸುರಿದ ಮಳೆ ದೊಡ್ಡ ಸಮಾಧಾನ ತಂದಿದೆ. ಜಿಲ್ಲೆಯ ಇಳಕಲ್ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿ, ಜಿಟಿಜಿಟಿ ಮಳೆ ಪ್ರಾರಂಭವಾಯಿತು. ವಾತಾವರಣ ಸಂಪೂರ್ಣ ತಂಪಾಗಿದ್ದು, ಇಳಕಲ್‌ನ ಜನರಿಗೆ ಮಲೆನಾಡಿನಲ್ಲಿದ್ದಂತಹ ಅನುಭವ ನೀಡಿತು.

ದಿಢೀರ್ ಸುರಿದ ಮಳೆಯಿಂದಾಗಿ ಇಳಕಲ್ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ಸಂಪೂರ್ಣ ನೀರುಮಯವಾಗಿದ್ದವು. ದೀರ್ಘಾವಧಿಯ ಬಿಸಿಲಿಗೆ ಕಂಗಾಲಾಗಿದ್ದ ಸಾರ್ವಜನಿಕರು ಈ ಬದಲಾದ ಆಹ್ಲಾದಕರ ವಾತಾವರಣವನ್ನು ಆನಂದಿಸಿದರು. ಇನ್ನು ಮಳೆಯ ಆಗಮನದಿಂದ ಕೃಷಿ ಭೂಮಿಗೆ ಹೊಸ ಚೈತನ್ಯ ಬಂದಂತಾಗಿದ್ದು, ಧರೆ ತಂಪಾಗುತ್ತಿದ್ದಂತೆ ರೈತರಲ್ಲಿ ಭರವಸೆ ಮೂಡಿದೆ. ಮುಂದಿನ ಕೃಷಿ ಚಟುವಟಿಕೆಗಳು ಹಾಗೂ ಬಿತ್ತನೆ ಕಾರ್ಯಗಳಿಗೆ ಈ ಮಳೆ ಅತ್ಯಂತ ಅನುಕೂಲಕರವಾಗಿದ್ದು, ಬಾಗಲಕೋಟೆ ಮತ್ತು ಇಳಕಲ್ ಭಾಗದ ಅನ್ನದಾತರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:

error: Content is protected !!