Uncategorized

ಹಿಂದು ಧರ್ಮ ರಕ್ಷಣೆಗೆ ಅರ್ಚಕರು ಕೊಂಡಿಯಾಗಲಿ: ಅರ್ಚಕರ ತರಬೇತಿ ಶಿಬಿರ ಸಮಾರೋಪದಲ್ಲಿ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಕರೆ

Share

ಹಿಂದು ಧರ್ಮದಲ್ಲಿ ಕೆಲವರು ಮಾಡಿದ ತಾರ ತಮ್ಯದಿಂದ ಹಿಂದು‌ ಧರ್ಮಕ್ಕೆ ಧಕ್ಕೆಯಾಗಿದೆ. ಅರ್ಚಕರು ದೇವರು ಮತ್ತು ಭಕ್ತರ ನಡುವೆ ಇರುವ ಸಂಬಂಧವನ್ನು ಗಟ್ಟಿಗೊಳಿಸಿ ಹಿಂದು‌ ಧರ್ಮವನ್ನು ಕಾಪಡಿಕೊಂಡು ಹೋಗಬೇಕು ಎಂದು ಚಿತ್ರದುರ್ಗದ ಮಾದಾರಚೆನ್ನಯ್ಯ ಗುರುಪೀಠದ ಶ್ರೀ‌ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಹೇಳಿದರು.

ಮಂಗಳವಾರ ಬೆಳಗಾವಿಯ ಲಕ್ಷ್ಮೀ ಟೇಕಡಿಯಲ್ಲಿ ದೇವಾಲಯ ಸಂವರ್ಧನಾ ಸಮಿತಿ, ಕರ್ನಾಟಕ ಹಾಗೂ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ ಹಿರೇಮಠ, ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅರ್ಚಕರ ತರಬೇತಿ ಶಿಬಿರ–2026ರ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.


ದೇವಾಲಯಗಳು ಸಾಮಾಜಿಕ ಬದಲಾವಣೆಯ ಸಂಕೇತ. ಹಿಂದು ಧರ್ಮದ ಪ್ರತಿಕ ದೇವಾಲಯಗಳು. ಸಂಸ್ಕಾರ, ಮಡಿವಂತಿಕೆಯನ್ನು ದೂರು ಇಡಬೇಕು. ಭಕ್ತರನ್ನು ಸಮಾಂತರವಾಗಿ ನೋಡಿಕೊಳ್ಳಬೇಕು. ಇದನ್ನು ಕೆಲವರು ವಿರೋಧ ಮಾಡುವವರು ಹೆಚ್ಚಿದ್ದಾರೆ. ಅದಕ್ಕೆ ಆಸ್ಪದ ನೀಡದಂತೆ ಅರ್ಚಕರು ಸೂಕ್ಷ್ಮವಾಗಿ ಇರಬೇಕು ಎಂದರು.

ದೇವಸ್ಥಾನ ದೇವಸ್ಥಾನಗಳ ತಾರತಮ್ಯದಿಂದ ಹಿಂದುಗಳು, ದಲಿತರು ಬೇರೆ ಧರ್ಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿರೋಧಿಗಳು ಬಿಂಬಿಸುತ್ತಿದ್ದಾರೆ. ಅದನ್ನು ಅರ್ಚಕರು ದೇವಸ್ಥಾನ‌ದ ಹಾಗೂ ಭಕ್ತರ ನಡುವೆ ಕೊಂಡಿಯಾಗಬೇಕು ಎಂದರು.

ದಲಿತರನ್ನು ದೇವಸ್ಥಾನದ ಒಳಗಡೆ ಅರ್ಚಕರು ಬಿಡಲಿಲ್ಲ ಎಂದು ದೇವಸ್ಥಾನದ ಎದುರುಗಡೆ ಒಂದು ಚರ್ಚ್ ನಿರ್ಮಾಣವಾಗುತ್ತದೆ. ಅಂಥ ಅವಕಾಶಕ್ಕೆ ಅರ್ಚಕರು ಕೊಡಬಾರದು.‌ ಮೊದಲು ಹಿಂದು‌ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕು. ಎಲ್ಲ‌ ಧರ್ಮದವರನ್ನು ಜೊತೆಗೆ ತೆಗೆದುಕೊಂಡು‌ ಹೋಗುವ ಜವಾಬ್ದಾರಿಯನ್ನು ಅರ್ಚಕರು ನಿಭಾಯಿಸಬೇಕು ಎಂದರು.


ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಏಳು ದಿನಗಳ ಕಾಲ ನಡೆದ ಅರ್ಚಕರ ತರಬೇತಿ ಶಿಬಿರದಲ್ಲಿ ಎಲ್ಲ ಸಮಾಜದ ಅರ್ಚಕರಿಗೆ ತಮ್ಮ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಿದ್ದಾರೆ. ಅದನ್ನು ಸಮಾಜಕ್ಕೆ ತಿಳಿಸುವುದು ನಿಮ್ಮೆಲ್ಲರ ಕರ್ತವ್ಯ. ಸಮಾಜವನ್ನು ಬದಲಾವಣೆ ಮಾಡುವುದು ಎಲ್ಲರ ಜವಾಬ್ದಾರಿ. ಎಲ್ಲರೂ ಸೇರಿ ದೇಶ ಕಟ್ಟುವ ಕೆಲಸ ಮಾಡೋಣ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ಜಗತ್ತಿನದಲ್ಲಿ ಸುಖ, ಶಾಂತಿ, ಸಮಾಧಾನ ನೆಲೆಸಬೇಕು. ಮನುಷ್ಯ ಮನುಷ್ಯನಂತೆ ಬದುಕಬೇಕು. ಆ ರೀತಿಯ ಸಂದೇಶ ಕೊಟ್ಟಿರುವುದು ಭಾರತ. ಪರಂಪರೆ, ವ್ಯವಸ್ಥೆಯಲ್ಲಿ ಅನೇಕ ಪರಂಪರೆಯನ್ನು ಹಿಂದು ಧರ್ಮ ಕೊಟ್ಟಿದೆ. ವ್ಯಕ್ತಿಗೆ ಶಕ್ತಿ ಸಿಗುವುದು ವ್ಯವಸ್ಥೆಯಿಂದ. ವ್ಯವಸ್ಥೆ ಪ್ರಭಾವವಾಗುವುದು ವ್ಯಕ್ತಿಯಿಂದ ಇಂಥ ಸಾಕಷ್ಟು ಉದಾರಣೆ ನಮ್ಮ ಭಾತದಲ್ಲಿದೆ ಎಂದರು.
ಮನೆ,ಮಠ, ಮಂದಿರದ ವ್ಯವಸ್ಥೆಯ ಕಾರಣದಿಂದ ವ್ಯಕ್ತಿಗೆ ಯೋಗ್ಯ ವ್ಯಕ್ತಿಯಾಗಿ ಬೆಳೆಯಲು ಸಂಸ್ಕಾರ ಸಿಗುತ್ತದೆ. ಈ ಮೂರು ವ್ಯವಸ್ಥೆ ಕೊಟ್ಟಿದ್ದು ಭಾರತ. ದೇವಸ್ಥಾನಗಳು ಪರಿವರ್ತನೆಯ ಕೇಂದ್ರವಾಗಬೇಕು. ಮಂದಿರದ ವ್ಯವಸ್ಥೆ ಸರಿಯಾಗಬೇಕು ದೇವಾಲಯ ಸಂವರ್ಧನಾ ಸಮಿತಿಯಲ್ಲಿ ಅರ್ಚಕರಿಗೆ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.

ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರವಾಗಬಾರದು. ಸಾಮಾಜಿಕ ಕೆಲಸಗಳಲ್ಲಿ ಕೇಂದ್ರವಾಗಬೇಕು. ಮಂದಿರಕ್ಕೆ ಬರುವ ಭಕ್ತರಿಗೆ ಸಮಾಧಾನವಾಗಬೇಕು. ಇದನ್ನು ನಿರಂತರವಾಗಿ ಅರ್ಚಕರು ಮಾಡಬೇಕು ಎಂದು ಕರೆ ನೀಡಿದರು.

ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಹಾಗೂ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ ಹುಕ್ಕೇರಿ ಹಿರೇಮಠದ ಸಹಯೋಗದಲ್ಲಿ ನಡೆದ ಅರ್ಚಕರ ತರಬೇತಿ‌ ಶಿಬಿರ ಇನ್ನೂ ಹೆಚ್ಚು ನಡೆಯಬೇಕು. ಅರ್ಚಕರು ದೇವಸ್ಥಾನದಲ್ಲಿ ದೇವರ ಪೂಜೆ ಮಾಡುವುದರ ಜೊತೆಗೆ ಭಕ್ತರಿಗೆ ಉತ್ತಮ ಮಾರ್ಗದರ್ಶನ‌ ನೀಡುವಂತಾಗಬೇಕು ಎಂದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅರ್ಚಕರಿಗೆ ಎಲ್ಲರನ್ನು ಪ್ರೀತಿ ಮಾಡಬೇಕು. ಬೇಧ ಮಾಡಿದರೆ ಅವರು ಅರ್ಚಕರಲ್ಲ. ಶಿಬಿರದಲ್ಲಿ ಭಾಗಿಯಾದ ಎಲ್ಲ ಅರ್ಚಕರು ಸಮಾಜಕ್ಕೆ ಮಾದರಿಯಾಗಬೇಕು. ಅರ್ಚಕರ ಮೂಲ ನಂಬಿಕೆ ಭಾರತವಾಗಿರಬೇಕು ಹಿಂದು‌ ಧರ್ಮವನ್ನು ಕಾಪಾಡಿಕೊಂಡು‌ ಹೋಗುವ ಕೆಲಸ ಮಾಡಬೇಕು ಎಂದರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಅಧ್ಯಕ್ಷ ಮನೋಹರ ಮಠದ, ವಿಜಯಕುಮಾರ ಪಾಟೀಲ್, ಅಶೋಕ ಶಿರೂರ, ಸೋಮಶೇಖರ ಹಿರೇಮಠ, ಸತೀಶ್ ಮಾಳೋದಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!