Uncategorized

ತುರುಮುರಿ ಘಟಕಕ್ಕೆ ಸಚಿವ ಯತೀಂದ್ರ ಸಿದ್ಧರಾಮಯ್ಯ ಭೇಟಿ: ಶೇ. 100ರಷ್ಟು ತ್ಯಾಜ್ಯ ಸಂಸ್ಕರಣೆಗೆ ಸಚಿವರ ಶ್ಲಾಘನೆ

Share

ಬೆಳಗಾವಿಯ ತುರುಮುರಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮಾನ್ಯ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕದಲ್ಲಿ ಶೇ. 100ರಷ್ಟು ತ್ಯಾಜ್ಯವನ್ನು ಅತ್ಯುತ್ತಮವಾಗಿ ಸಂಸ್ಕರಿಸುತ್ತಿರುವುದನ್ನು ಕಂಡು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಿಶ್ರ ತ್ಯಾಜ್ಯವನ್ನು ಪ್ರತ್ಯೇಕಿಸಲು ಅತ್ಯಾಧುನಿಕ ‘ಬ್ಯಾಲಿಸ್ಟಿಕ್ ಮೆಷಿನ್’ ಹೊಂದಿರುವ ರಾಜ್ಯದ ಏಕೈಕ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಬೆಳಗಾವಿ ಪಾತ್ರವಾಗಿದೆ. ತುರುಮುರಿ ಘಟಕದ ಕಾರ್ಯವೈಖರಿಯನ್ನು ಹತ್ತಿರದಿಂದ ವೀಕ್ಷಿಸಿದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ, ಇಲ್ಲಿನ ತಂತ್ರಜ್ಞಾನ ಹಾಗೂ ತ್ಯಾಜ್ಯ ವಿಲೇವಾರಿ ಮಾದರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ ಮಾತನಾಡಿದ ಸಚಿವರು, ಬೆಳಗಾವಿ ಪಾಲಿಕೆಯ ಈ ಯಶಸ್ವಿ ಮಾದರಿಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಹಾಗೂ ಕರ್ನಾಟಕದ ಎಲ್ಲಾ ಮಹಾನಗರ ಪಾಲಿಕೆಗಳಿಗೂ ಇಂತಹದೇ ಬ್ಯಾಲಿಸ್ಟಿಕ್ ಯಂತ್ರಗಳನ್ನು ಶೀಘ್ರದಲ್ಲೇ ಖರೀದಿಸಿ ಒದಗಿಸಲಾಗುವುದು ಎಂದು ಘೋಷಿಸಿದರು.

Tags:

error: Content is protected !!