Dharwad

ಧಾರವಾಡದ ಮಂಜುನಾಥ ಮಕ್ಕಳಗೇರಿ ಅಭಿಮಾನಿ ಬಳಗದ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ….

Share

ಧಾರವಾಡ ಮಂಜುನಾಥ ಮಕ್ಕಳಗೇರಿ ಅಭಿಮಾನಿ ಬಳಗದ ವತಿಯಿಂದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿದ್ದು, ಮುಂದುವರೆದ ಭಾಗವಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ರಕ್ತಹೀನತೆ ತಪಾಸಣೆ ಶಿಬಿರ ನಡೆಸಲಾಯಿತು.

ಹೌದು ..ಧಾರವಾಡ ನಗರದ ಜಿಲ್ಲಾ ಆಸ್ಪತ್ರೆಯ ಬಳಿ ಕರ್ನಾಟಕ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಂದು ಮಂಜುನಾಥ ಮಕ್ಕಳಗೇರಿಯವರ ಅಭಿಮಾನ ಬಳಗದ ವತಿಯಿಂದ ಉಚಿತ ಅನೀಮಿಯಾ ಅಂದರೆ ರಕ್ತಹೀನತೆ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಮಂಜುನಾಥ ಮಕ್ಕಳಗೇರಿಯವರು ಉದ್ಘಾಟನೆ ಮಾಡಿದರು. ಬಳಿಕ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ ಮಕ್ಕಳಗೇರಿಯವರು, ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವುದು ಅತ್ಯಂತ ಅವಶ್ಯಕವಾಗಿದೆ. ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರನ್ನು ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು.

ಶಾಲೆಯಲ್ಲಿ ಶಿಕ್ಷಕರು ಕಂಡ ತಕ್ಷಣ ಅವರ ಪಾದ ಮುಟ್ಟಿ ನಮಸ್ಕರಿಸುವ ವಿಧೇಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜತೆಗೆ ಮುಂದುವರಿದು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಕ್ತಹೀನತೆಯನ್ನು ತಡೆಗಟ್ಟಲು ಇಂತಹ ಉಚಿತ ಅನೀಮಿಯಾ ತಪಾಸಣಾ ಶಿಬಿರಗಳು ಸಹಕಾರಿಯಾಗಿವೆ. ತಪಾಸಣೆ ನಂತರ ವೈದ್ಯರು ನೀಡುವ ಕಬ್ಬಿಣಾಂಶದ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು. ಇದರೊಂದಿಗೆ ದೇಹಕ್ಕೆ ಹಾನಿಕಾರಕವಾದ ಜಂಕ್ ಫುಡ್ ಸೇವನೆಯನ್ನು ಸಂಪೂರ್ಣವಾಗಿ ತೊರೆದು, ಪೌಷ್ಟಿಕ ಹಾಗೂ ತಾಜಾ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎನ್. ಎನ್. ಸವಣೂರ, ಶಿಕ್ಷಕರಾದ ರಮೇಶ ಮೂಲಿಮನಿ ಸೇರಿ ಮಂಜುನಾಥ ಮಕ್ಕಳಗೇರಿ ಅಭಿಮಾನಿಗಳದ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!