ದೆಹಲಿ ಜಂತರ ಮಂತರನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುಂದಿಟ್ಟುಕೊಂಡು ಹೋರಾಟದ ವೇಳೆ ನಡೆದ ಹಿಂಸಾಚಾರಕ್ಕೆ ಕಾಕ್ರೋಜ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಪಕ್ಷವೇ ನೇರ ಕಾರಣವೆಂದು ಆರೋಪಿ, ಧಾರವಾಡದಲ್ಲಿ ಬಿಜೆಪಿಯ ಸ್ಥಳೀಯ ನಾಯಕರು ಸೇರಿ ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿ ಧಾರವಾಡ ಮಾಹಾನಗರ ಜಿಲ್ಲಾ ಬಿಜೆಪಿ ಘಟಕ ನೇತೃತ್ವದಲ್ಲಿ ಧಾರವಾಡದ ಸುಭಾಷ್ ರಸ್ತೆಯ ಬಿಜೆಪಿ ಕಚೇರಿಯಿಂದ ವಿವೇಕಾನಂದ ವೃತದವರೆಗೆ ಪ್ರತಿಭಟನೆ ಮೆರವಣಿಗೆ ಮಾಡುವ ಮೂಲಕ ಕಾಕ್ರೋಜ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಕಾಂಗ್ರೆಸ್ ಹಾಗೂ ಕಾಕ್ರೋಜ್ ಜನತಾ ಪಾರ್ಟಿ ಮುಖಂಡರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ದೆಹಲಿ ಜಂತರಮಂತರನಲ್ಲಿ ನೀಟ ಪ್ರಶ್ನೆ ಪತ್ರಿಕೆ ಸೋರಿಕೆ ಹೋರಾಟ ಹಿಂಸಾಚಾರವಾಗಿದೆ.
ಹಿಂಸಾಚಾರ, ಗಲಭೆ ಹಾಗೂ ಗಲಾಟೆಯನ್ನು ಸೃಷ್ಟಿಸಿ ಪ್ರಧಾನಿ ಮೋದಿಯವರನ್ನು ಕಟ್ಟಿಹಾಕಲು ಕಾಂಗ್ರೆಸ್ ಸಂಚು ರೂಪಿಸುತ್ತಲೇ ಬರುತ್ತಿದೆ. ಆದರೆ ನಮ್ಮ ದೇಶದ ಜನಾ ಕಾಂಗ್ರೆಸ್ ತಕ್ಕ ಪಾಠ ಕಲಿಸುತ್ತಾ ಬರುತ್ತಿದ್ದಾರೆ. ಈಗ ಕಾಕ್ರೋಜ್ ಜನತಾ ಪಾರ್ಟಿ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದೆ. ವಿದೇಶಿ ಹಣ ಬಳಸಿಕೊಂಡು ಕಾಂಕ್ರೋಜ ಜನತಾ ಪಾರ್ಟಿ ಮುಖಂಡ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಬಣ್ಣದ ಮಾತಿಗೆ ಮರಳಾಗಿ ವಿದ್ಯಾರ್ಥಿಗಳು ಸೇರಿ ಯುವ ಸಮುದಾಯ ಬಲಿಯಾಗಬಾರದು. ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಹೋರಾಟ ಆರಂಭಿಸಿ ಅಲ್ಲಿ ಬೇರೆ ಬೇರೆ ರೀತಿ ದ್ವೇಷ ಸೃಷ್ಟಿಸುವ ಮಾತುಗಳು ಈಗಾಗಲೇ ಸೊಸಿಯಲ್ ಮೀಡಿಯಾದಲ್ಲಿ ವೈರಲಾಗಿವೆ. ಹಾಗಾಗಿ ಕಾಂಗ್ರೆಸ್ ಹಾಗೂ ಕಾಂಕ್ರೋಜ ಪಾರ್ಟಿ ಅಂತಾ ಹೇಳಿಕೊಂಡ ಮುಖಂಡ ಬಗ್ಗೆ ಎಚ್ಚರಿಕೆಯಿಂದರಬೇಕು. ದೆಹಲಿ ಹಿಂಸಾಚಾರ ಘಟನೆ ತನಿಖೆಯನ್ನು ಎನ್‌ಐಎಗೆ ನೀಡಬೇಕು ಎಂದು ಆಗ್ರಹಿಸಿದರು.
